facebook pixel
chevron_right Business
transparent
ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ
ಕಳೆದ ಕೆಲ ದಿನಗಳಿಂದ ಏರುಮುಖ ಕಾಣುತ್ತಿದ್ದ ಪೆಟ್ರೋಲ್, ಡೀಸೆಲ್ ಬೆಲೆ ಈಗ ಇಳಿಮುಖವಾಗುತ್ತಿದೆ. ಪೆಟ್ರೋಲ್, ಡೀಸೆಲ್ ಮೂರನೇ ದಿನವೂ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 82.69ರಷ್ಟಿದ್ದು 39 ಪೈಸೆ ಇಳಿಕೆಯಾಗಿದೆ. ಅದೇ ರೀತಿ ಡೀಸೆಲ್ 75.85ರಷ್ಟಿದ್ದು 12 ಪೈಸೆ ಕಡಿಮೆಯಾಗಿದೆ. ಇನ್ನು ದೇಶದ ರಾಜಧಾನಿ ದಿಲ್ಲಿಯಲ್ಲಿ 39 ಪೈಸೆ ಪೆಟ್ರೋಲ್ ಕಡಿಮೆಯಾಗಿ 81.99ರಷ್ಟಿದ್ದರೆ ಡೀಸೆಲ್ ಬೆಲೆ 12 ಪೈಸೆಯಷ್ಟು ಇಳಿಕೆಯಾಗಿದ್ದು 75.36ರಷ್ಟಿದೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 38 ಪೈಸೆಯಷ್ಟು ಪೆಟ್ರೋಲ್ (ಲೀಟರ್ ಬೆಲೆ 87.46 ರೂ.) ಕಡಿಮೆಯಾಗಿದ್ದರೆ, ಡೀಸೆಲ್ 13 ಪೈಸೆ ಕಡಿಮೆಯಾಗಿ 79 ರೂ.ಗಳಷ್ಟಿದೆ. ಕೋಲ್ಕತದಲ್ಲಿ ಪೆಟ್ರೋಲ್ ಬೆಲೆ 38 ಪೈಸೆ, ಡೀಸೆಲ್ 12 ಪೈಸೆ ಕಡಿಮೆಯಾಗಿದೆ.
ಇರಾನ್‌ ತೈಲ ಆಮದು ಬಗ್ಗೆ ಮುಂದುವರಿದ ಮಾತುಕತೆ
ಇರಾನ್‌ನಿಂದ ಕಚ್ಚಾ ತೆಲವನ್ನು ಆಮದು ಮಾಡುವುದಕ್ಕೆ ಸಂಬಂದಿಸಿ ಅಮೆರಿಕದ ಜತೆಗೆ ಭಾರತ ಮಾತುಕತೆ ಮುಂದುವರಿಸಿದೆ. ರಷ್ಯಾದ ಜತೆ ಎಸ್‌-400 ಕ್ಷಿಪಣಿಗಳ ಡೀಲ್‌ ಹಾಗೂ ಇರಾನ್‌ ತೈಲ ಆಮದಿಗ ಅಗತ್ಯತೆ ಬಗ್ಗೆ ಅಮೆರಿಕಕ್ಕೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಕುಮಾರ್‌ ತಿಳಿಸಿದ್ದಾರೆ. ಹಲವು ಹಂತಗಳಲ್ಲಿ ಅಮೆರಿಕಕ್ಕೆ ಭಾರತದ ನಿಲುವುಗಳನ್ನು ಸ್ಪಷ್ಟಪಡಿಸಲಾಗಿದೆ. ಇದರಿಂದ ಭಾರತದ ಪರಿಸ್ಥಿತಿ, ನಿರೀಕ್ಷೆಗಳ ಬಗ್ಗೆ ಅಮೆರಿಕಕ್ಕೆ ಚೆನ್ನಾಗಿ ಅರ್ಥವಾಗಲಿದೆ ಎಂದು ಅವರು ಹೇಳಿದರು. ಅಮೆರಿಕ ನವೆಂಬರ್‌ 4ರಿಂದ ಇರಾನ್‌ ವಿರುದ್ಧ ಕಠಿಣ ಆರ್ಥಿಕ ನಿರ್ಬಂಧಗಳನ್ನು ಜಾರಿಗೆ ತರಲು ಉದ್ದೇಶಿಸಿದೆ. ಹಾಗೂ ಎಲ್ಲ ರಾಷ್ಟ್ರಗಳೂ ಇರಾನ್‌ ತೈಲ ಖರೀದಿಸುವುದನ್ನು ಬಿಟ್ಟುಬಿಡಬೇಕು ಎಂದು ಬಯಸಿದೆ. ಆದರೆ ಇರಾನ್‌ ತೈಲ ಭಾರತದ ಆರ್ಥಿಕ ಪ್ರಗತಿಗೆ ಅವಶ್ಯಕವಾಗಿದ್ದು, ತಪ್ಪಿದರೆ ಸಮಸ್ಯೆಯಾಗಲಿದೆ.
ಮುಂಬಯಿ-ಗೋವಾ ಐಷಾರಾಮಿ ಹಡಗು ಸಂಚಾರ
ಹಡಗುಗಳಲ್ಲಿ ಸವಾರಿ ಹಾಗೂ ವೀಕ್ಷಣೆಯ ಕುತೂಹಲಿಗೆ ಇದು ಸಿಹಿ ಸುದ್ದಿ. ಮುಂಬಯಿನ ಪೋರ್ಟ್‌ ಟ್ರಸ್ಟ್‌ (ಎಂಬಿಪಿಟಿ) ತನ್ನ ನವೀಕೃತ ದೇಶೀಯ ಕ್ರೂಸ್‌ ಟರ್ಮಿನಲ್‌ ಹಾಗೂ ಶತಮಾನದಷ್ಟು ಹಳೆಯ ಮಸೂನರಿ ವಾಚ್‌ ಟವರ್‌ಗೆ ಶನಿವಾರ ಚಾಲನೆ ನೀಡಲಿದೆ. ಮುಂಬಯಿ ಮತ್ತು ಗೋವಾ ನಡುವೆ ಸಂಚರಿಸಲಿರುವ ಭಾರತದ ಮೊದಲ ಐಷಾರಾಮಿ ಹಡಗು 'ಅಂಗ್ರಿಯಾ' ಅಕ್ಟೋಬರ್‌ 20ರಿಂದ ಸಂಚಾರ ಆರಂಭಿಸಲಿದೆ. ಈ ಐಷಾರಾಮಿ ಹಡಗಿನಲ್ಲಿ ಟಿಕೆಟ್‌ ದರ 4,300 ರೂ.ಗಳಿಂದ ಆರಂಭವಾಗಿದ್ದು, ಊಟ-ತಿಂಡಿ ಸೇರಿದಾಗ ಕನಿಷ್ಠ 7,500 ರೂ. ದರ ಸೌಲಭ್ಯಗಳನ್ನು ಅಧರಿಸಿ 12,000 ರೂ. ಅಂಗ್ರಿಯಾ ಕ್ರೂಸ್‌ ವೆಬ್‌ಸೈಟ್‌ನಲ್ಲಿ ಪ್ರಯಾಣಿಕರು ಟಿಕೆಟ್‌ ಬುಕ್‌ ಮಾಡಬಹುದು. ಹಡಗು 7 ಅಂತಸ್ತುಗಳನ್ನು ಹೊಂದಿದ್ದು, ಜಪಾನ್‌ನಲ್ಲಿ ನಿರ್ಮಾಣವಾಗಿದೆ. ಎರಡು ರೆಸ್ಟೊರೆಂಟ್‌, 6 ಬಾರ್‌, ಸ್ಪಾ, ಕಾಫಿ ಶಾಪ್‌, 104 ಕೊಠಡಿಗಳು, ಈಜುಕೊಳ ಇತ್ಯಾದಿ ಸೌಲಭ್ಯಗಳನ್ನು ಒಳಗೊಂಡಿದೆ.
ಗುಜರಾತ್‌ನಲ್ಲಿ ಶೇ.85ರಷ್ಟು ಉದ್ಯೋಗ ಸ್ಥಳೀಯರಿಗೆ ಮೀಸಲು?
ಗುಜರಾತ್‌ನ ಉದ್ದಿಮೆಗಳಲ್ಲಿ ಶೇ.85ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ಕಡ್ಡಾಯವಾಗಿ ಒದಗಿಸುವ ಬಗ್ಗೆ ಸರಕಾರ ಹೊಸ ಕಾನೂನು ರಚಿಸಲು ಪರಿಶೀಲಿಸಿದೆ. ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ಇತ್ತೀಚೆಗೆ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಹೀಗಿದ್ದರೂ, ಸರಕಾರದ ಈ ನಡೆಗೂ ಗುಜರಾತ್‌ನಲ್ಲಿ ಇತ್ತೀಚೆಗೆ ವಲಸಿಗರ ವಿರುದ್ಧ ನಡೆದಿರುವ ಪ್ರತಿಭಟನೆ, ಹಿಂಸಾಚಾರಕ್ಕೂ ಸಂಬಂಧ ಇಲ್ಲ ಎಂದು ರಾಜ್ಯದ ಕಾರ್ಮಿಕ ಸಚಿವ ದಿಲೀಪ್‌ ಠಾಕೂರ್‌ ತಿಳಿಸಿದ್ದಾರೆ. ಈಗಾಗಲೇ ಸರಕಾರ ಮಾರ್ಗದರ್ಶಿಯೊಂದನ್ನು ಬಿಡುಗಡೆಗೊಳಿಸಿದ್ದು, ಕೈಗಾರಿಕ ಘಟಕಗಳು ಶೇ.85ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೇ ಕೊಡಬೇಕು ಎಂದಿದೆ. ಹೀಗಿದ್ದರೂ ಇದಕ್ಕೆ ತಪ್ಪಿದರೆ ದಂಡನೆಯ ಕ್ರಮ ಸದ್ಯಕ್ಕಿಲ್ಲ. ಒಂದು ವೇಳೆ ಕಡ್ಡಾಯಗೊಳಿಸಿದರೆ, ಕಂಪನಿಗಳು ಅನುಸರಿಸುವುದೂ ಕಡ್ಡಾಯವಾಗಲಿದ್ದು, ತಪ್ಪಿದರೆ ದಂಡನೆಯ ಕ್ರಮ ಎದುರಿಸಬೇಕಾಗಿ ಬರಬಹುದು.
ಇಸುಝು ಎಂಯು-ಎಕ್ಸ್ ಎಸ್‌ಯುವಿ ಬಿಡುಗಡೆ
ಜಪಾನ್ ಮೂಲದ ಪ್ರತಿಷ್ಠಿತ ವಾಹನ ಸಂಸ್ಥೆ ಇಸುಝು ಮೋಟಾರ್ಸ್ ಇಂಡಿಯಾ ಸಂಸ್ಥೆಯು ಅತಿ ನೂತನ ಎಂಯು-ಎಕ್ಸ್ ಸ್ಪೋರ್ಟ್ ಯುಟಿಲಿಟಿ ವಾಹನವನ್ನು ಬಿಡುಗಡೆಗೊಳಿಸಿದೆ. ಆರಂಭಿಕ ಬೆಲೆ: 26.27 ಲಕ್ಷ ರೂ. (ಹೈದರಾಬಾದ್) ಇನ್ನು ಇಸುಝು ಎಂಯು-ಎಕ್ಸ್ 4x4 ವೆರಿಯಂಟ್ 28.23 ಲಕ್ಷ ರೂ.ಗಳಷ್ಟು ದುಬಾರಿಯೆನಿಸಲಿದೆ. ನವೀಕೃತ ಫ್ರಂಟ್ ಹಾಗೂ ರಿಯರ್ ಈಗಲ್ ಪ್ರೇರಿತ ಶೈಲಿ, ಸಿಗ್ನೇಚರ್ ಇಸುಝು ಗ್ರಿಲ್ ಡಿಸೈನ್, ಪರಿಷ್ಕೃತ ಬೈ-ಎಲ್‌ಇಡಿ, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಸಂಯೋಜಿತ ಲೈಟ್ ಗೈಡ್, ಡೇಟೈಮ್ ರನ್ನಿಂಗ್ಸ ಲೈಟ್ಸ್ ಇತ್ಯಾದಿ ವೈಶಿಷ್ಟ್ಯಗಳಿವೆ. ಹಿಂದುಗಡೆ ಟೈಲ್ ಲೈಟ್, ಎಲ್‌ಇಡಿ ಪೊಶಿಷನ್ ಲ್ಯಾಂಪ್, ಟು-ಟೋನ್ ರಿಯರ್ ಸ್ಪಾಯ್ಲರ್, ಶಾರ್ಕ್-ಫಿನ್ ಆ್ಯಂಟಿನಾ ಜತೆಗೆ ಗನ್ ಮೆಟಲ್ ಫಿನಿಶ್ ಇರಲಿದೆ. ಇನ್ನು 18 ಇಂಚುಗಳ ಮಲ್ಟಿ ಸ್ಪೋಕ್ ಟ್ವಿಸ್ಟ್ ಡಿಸೈನ್ ಹಾಗೂ ಡೈಮಂಡ್ ಕಟ್ ಅಲಾಯ್ ಚಕ್ರಗಳಿರಲಿದೆ.
ಫೋಕ್ಸ್‌ವ್ಯಾಗನ್ ಪಸ್ಸಾಟ್ ಕನೆಕ್ಟ್ ಎಂಟ್ರಿ
ಜರ್ಮನಿಯ ಪ್ರೀಮಿಯಂ ಕಾರು ಸಂಸ್ಥೆ ಫೋಕ್ಸ್‌ವ್ಯಾಗನ್ ಅತಿ ನೂತನ, ಪಸ್ಸಾಟ್ ಕನೆಕ್ಟ್ ಪ್ರೀಮಿಯಂ ಸೆಡಾನ್ ಕಾರನ್ನು ಬಿಡುಗಡೆಗೊಳಿಸಿದೆ. ಈ ಮೂಲಕ ಹಬ್ಬದ ಋತುವಿನಲ್ಲಿ ಗರಿಷ್ಠ ಮಾರಾಟವನ್ನು ಗುರಿಯರಿಸಿದೆ. ಅತ್ಯಾಧುನಿಕ ಟೆಲಿಮ್ಯಾಟಿಕ್ಸ್ ಹಾಗೂ ವೆಹಿಕಲ್ ಅಸಿಸ್ಟನ್ಸ್ ಸಿಸ್ಟಂ ನೂತನ ಫೋಕ್ಸ್‌ವ್ಯಾಗನ್ ಕನೆಕ್ಟ್ ಕಾರನ್ನು ವಿಭಿನ್ನವಾಗಿಸಲಿದೆ. ಕಂಫರ್ಟ್‌ಲೈನ್: 25.99 ಲಕ್ಷ ರೂ. ಹೈಲೈನ್: 28.99 ಲಕ್ಷ ರೂ. ಫೋಕ್ಸ್‌ವ್ಯಾಗನ್ ಪಸ್ಸಾಟ್ ಕನೆಕ್ಟ್ ಕಾರು, ಟ್ರಿಪ್ ಟ್ರ್ಯಾಕಿಂಗ್, ಇಂಧನ ವೆಚ್ಚ ಮಾನಿಟರ್, ಡ್ರೈವಿಂಗ್ ಮಾಹಿತಿ ಇತ್ಯಾದಿ ವಿಶಿಷ್ಟತೆಗಳನ್ನು ಹೊಂದಿರಲಿದೆ. ಇದರಲ್ಲಿರುವ 2.0 ಲೀಟರ್ ಟಿಡಿಐ ಡೀಸೆಲ್ ಎಂಜಿನ್ 350 ಎನ್‌ಎಂ ತಿರುಗುಬಲದಲ್ಲಿ 177 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇರುತ್ತದೆ.
Petrol Price: ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ತುಸು ಇಳಿಕೆ
ಕಳೆದ ಕೆಲವು ದಿನಗಳಿಂದ ಗಗನಮುಖಿಯಾಗಿ ಜನಸಾಮಾನ್ಯರ ಹೊರೆಯಾಗಿದ್ದ ಪೆಟ್ರೋಲ್ ಬೆಲೆ ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ತುಸು ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಗುರುವಾರದ ಪೆಟ್ರೋಲ್‌ ದರ ಲೀಟರ್‌ಗೆ 83.33 ರೂ ಮತ್ತು ಡೀಸೆಲ್‌ ದರ 76.02 ರೂ ಇದೆ. ದೇಶದ ರಾಜಧಾನಿ ದಿಲ್ಲಿಯಲ್ಲಿ ಇಂದು ಪೆಟ್ರೋಲ್ ಬೆಲೆ 21 ಪೈಸೆ, ಡೀಸೆಲ್ 11 ಪೈಸೆ ಕಡಿಮೆಯಾಗಿದೆ. ಇದರಿಂದ ಲೀಟರ್ ಪೆಟ್ರೋಲ್ ಬೆಲೆ ರೂ.82.62ರಷ್ಟಿದ್ದರೆ, ಡೀಸೆಲ್ ಬೆಲೆ ರೂ.75.58ರಷ್ಟಿದೆ. ಮೆಟ್ರೋ ನಗರಗಳಾದ ಮುಂಬೈ, ಚೆನ್ನೈ, ಕೋಲ್ಕತ್ತಾದಲ್ಲಿ ಪೆಟ್ರೋಲ್ 21 ಪೈಸೆ, ಡೀಸೆಲ್ 11 ಪೈಸೆಯಷ್ಟು ಕಡಿಮೆಯಾಗಿರುವುದಾಗಿ ಇಂಧನ ಮಾರುಕಟ್ಟೆ ಕಂಪೆನಿಗಳು ತಿಳಿಸಿವೆ. ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ 21 ಪೈಸೆಯಷ್ಟು ಕಡಿಮೆಯಾಗುವ ಮೂಲಕ ಲೀಟರ್ ಬೆಲೆ 88.08ರಷ್ಟಿದೆ. ಇನ್ನು ಕೋಲ್ಕತದಲ್ಲಿ 84.44, ಚೆನ್ನೈನಲ್ಲಿ 85.88ರಷ್ಟಿದೆ.
ಆಧಾರ್‌ ಆಧಾರಿತ ಸೇವೆ ಸ್ಥಗಿತಗೊಳಿಸಿ: ಕಂಪನಿಗಳಿಗೆ ಸೂಚನೆ
ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು ಹಲವಾರು ಡಿಜಿಟಲ್‌ ಪೇಮೆಂಟ್‌ ಕಂಪನಿಗಳಿಗೆ ಆಧಾರ್‌ ಆಧಾರಿತ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿದೆ. ಖಾಸಗಿ ಕಂಪನಿಗಳು ಆಧಾರ್‌ ಮಾಹಿತಿ ಸಂಗ್ರಹಿಸುವಂತೆ ಇಲ್ಲ ಎಂದು ಸುಪ್ರೀಂಕೋರ್ಟ್‌ ಇತ್ತೀಚೆಗೆ ತೀರ್ಪು ಕೊಟ್ಟ ನಂತರ, ಪ್ರಾಧಿಕಾರವು ಹೊರಡಿಸಿದ ಮಹತ್ವದ ಸೂಚನೆ ಇದಾಗಿದೆ. ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು 102 ಕೋಟಿಗೂ ಅಧಿಕ ಭಾರತೀಯರ ಆಧಾರ್‌ ಮಾಹಿತಿಯನ್ನು ನಿರ್ವಹಿಸುತ್ತಿದ್ದು, ಆಧಾರ್ ಸಿಸ್ಟಮ್‌ನಿಂದ ಹೊರ ಬಂದಿರುವ ಬಗ್ಗೆ ದೃಢೀಕರಣ ನೀಡಲು ಪೇಮೆಂಟ್‌ ಕಂಪನಿಗಳಿಗೆ ನಿರ್ದೇಶಿಸಿದೆ. ಪೇಪಾಯಿಂಟ್‌, ಎಕೊ ಫೈನಾನ್ಷಿಯಲ್‌ ಸವೀರ್‍ಸ್‌ ಮತ್ತು ಆಕ್ಸಿಜನ್‌ ಸವೀರ್‍ಸ್‌ ಮುಂತಾದ ಪೇಮೆಂಟ್‌ ಕಂಪನಿಗಳು ಯುಐಡಿಎಐನಿಂದ ನೋಟಿಸ್‌ಗಳನ್ನು ಸ್ವೀಕರಿಸಿವೆ. ಆಧಾರ್‌ ಎಕೊ ಸಿಸ್ಟಮ್‌ನಿಂದ ನಿರ್ಗಮಿಸಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡಲು ಈ ಕಂಪನಿಗಳಿಗೆ ನಿರ್ದೇಶಿಸಲಾಗಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಸದ್ಯಕ್ಕೆ ಇಂಥ ನೋಟಿಸ್‌ ರವಾನೆಯಾಗಿದೆ.
ರಿಲಯನ್ಸ್‌ಗೆ 9,516 ಕೋಟಿ ರೂ. ಲಾಭ
ಸೆಪ್ಟೆಂಬರ್ ಅವಧಿಯ ಎರಡನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ ಆರ್‌ಐಎಲ್‌ ನಿವ್ವಳ ಲಾಭವು ಶೇ. 17.4 ಏರಿಕೆಯಾಗಿದ್ದು,9,516 ಕೋಟಿ ರೂ. ಇದು ಕಂಪನಿಯ ಸಾರ್ವಕಾಲಿಕ ದಾಖಲೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪನಿಯ ನಿವ್ವಳ ಲಾಭ 8,109 ಕೋಟಿ ರೂ. ಪೆಟ್ರೋಕೆಮಿಕಲ್ ಬ್ಯುಸಿನೆಸ್, ರೀಟೇಲ್‌ ವ್ಯವಹಾರ ಮತ್ತು ಜಿಯೊದ ಟೆಲಿಕಾಂ ವ್ಯವಹಾರದಿಂದಾಗಿ ಆರ್‌ಐಎಲ್‌ ಲಾಭ ಗಣನೀಯವಾಗಿ ಏರಿಕೆಯಾಗಿದೆ. 54.5 ವೃದ್ಧಿಯಾಗಿದ್ದು, 1.56 ಲಕ್ಷ ಕೋಟಿ ರೂ. ಈ ಸಮೂಹದ ರಿಲಯನ್ಸ್ ಜಿಯೊ 681 ಕೋಟಿ ರೂ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ. ರೀಟೇಲ್‌ ಬ್ಯುಸಿನೆಸ್‌ ನಿವ್ವಳ ಲಾಭವು ಶೇ. 213 ರಷ್ಟು ವೃದ್ಧಿಸಿದ್ದು, 1,392 ಕೋಟಿ ರೂ.
ಅಪ್ಪ-ಮಗನ ಸಂಘರ್ಷ: ರೇಮಂಡ್‌ ಸಂಸ್ಥಾಪಕ ಸಿಂಘಾನಿಯಾ ವಜಾ
ನಮ್ಮ ತಂದೆಯನ್ನು ಪದಚ್ಯುತಗೊಳಿಸುವಲ್ಲಿ ನನ್ನ ಪಾತ್ರವೇನಿಲ್ಲ. ಕಂಪನಿಯ ಆಡಳಿತ ಮಂಡಳಿಯ ತೀರ್ಮಾನವದು. ಗೌತಮ್‌ ಸಿಂಘಾನಿಯಾ ಹೊಸದಿಲ್ಲಿ : ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ರೇಮಂಡ್‌ ಗ್ರೂಪ್‌ನ 'ಗೌರವ-ಅಧ್ಯಕ್ಷ' ಸ್ಥಾನದಿಂದ 80 ವರ್ಷದ ವಿಜಯಪತ್‌ ಸಿಂಘಾನಿಯಾ ಅವರನ್ನು ಆಡಳಿತ ಮಂಡಳಿ ವಜಾಗೊಳಿಸಿದೆ. ಈ ಮಂಡಳಿಗೆ ವಿಜಯಪತ್‌ ಅವರ ಪುತ್ರ ಗೌತಮ್‌ ಸಿಂಘಾನಿಯಾ ಅವರೇ ಅಧ್ಯಕ್ಷರು. ರೇಮಂಡ್‌ ಗ್ರೂಪ್‌ನ ಮುಖ್ಯಸ್ಥರು ಮತ್ತು ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಗೌತಮ್‌ ಮತ್ತು ಅವರ ತಂದೆ ಜತೆಗಿನ ಸಂಘರ್ಷ, ಈಗ ಈ ರೂಪ ಪಡೆದಿದೆ. ಈ ಹಿನ್ನೆಲೆಯಲ್ಲಿ ಕಂಪನಿಯ ಷೇರುಗಳು ಗುರುವಾರ ಶೇ.3ರಷ್ಟು ಕುಸಿದಿವೆ. ಟೆಕ್ಸ್‌ಟೈಲ್ಸ್‌ ಜಗತ್ತಿನ ದೈತ್ಯ ಕಂಪನಿಯನ್ನಾಗಿ ರೇಮಂಡ್‌ ಅನ್ನು ಕಟ್ಟಿ ಬೆಳೆಸುವಲ್ಲಿ ವಿಜಯ್‌ಪತ್‌ ಸಿಂಘಾನಿಯಾ ಅವರ ಪಾತ್ರ ಹಿರಿದು. ಕಂಪನಿಯ ಸಂಸ್ಥಾಪಕರಾದ ಅವರು, ತಮ್ಮ ಆಸ್ತಿ ಮತ್ತು ವ್ಯವಹಾರಗಳನ್ನು ಮಗನಿಗೆ ವಹಿಸಿದ್ದರು.
ದೊಡ್ಡಬಳ್ಳಾಪುರದಲ್ಲಿ ಟಾಫೆ ಹೂಡಿಕೆ
ಟ್ರ್ಯಾಕ್ಟರ್‌ ಹಾಗೂ ಕೃಷಿ ಉಪಕರಣಗಳ ಉತ್ಪಾದಕ ಟಾಫೆ, ಪ್ರಸಕ್ತ ಸಾಲಿನಲ್ಲಿ 250 ಕೋಟಿ ರೂ. ಹೂಡಿಕೆ ಮಾಡಲಿದ್ದು, ಬೆಂಗಳೂರಿಗೆ ಸಮೀಪದ ದೊಡ್ಡಬಳ್ಳಾಪುರದಲ್ಲಿರುವ ಘಟಕದಲ್ಲಿಯೂ ಕಂಪನಿ ಹೂಡಿಕೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಭಾರತದಲ್ಲಿ ಕಂಪನಿ ಮೂರು ಘಟಕಗಳನ್ನು ಹೊಂದಿದ್ದು, ತನ್ನ ಉತ್ಪಾದನಾ ಸಾಮರ್ಥ್ಯ‌ವನ್ನು 50,000 ಟ್ರ್ಯಾಕ್ಟರ್‌ಗಳಷ್ಟು ಏರಿಸಲಿದೆ ಎಂದು ಅಧ್ಯಕ್ಷ ಮಲ್ಲಿಕಾ ಶ್ರೀನಿವಾಸನ್‌ ತಿಳಿಸಿದ್ದಾರೆ. ದೇಶದಲ್ಲಿ ಎರಡನೇ ಅತಿ ದೊಡ್ಡ ಟ್ರಾಕ್ಟರ್‌ ಉತ್ಪಾದಕ ಕಂಪನಿ ಟಾಫೆ ಆಗಿದೆ. ಮಧ್ಯಪ್ರದೇಶದ ಭೋಪಾಲದಲ್ಲಿ ಮತ್ತೊಂದು ಘಟಕವನ್ನು ಟಾಫೆ ಒಳಗೊಂಡಿದೆ. ಅಲ್ಲಿ ಈಚರ್‌ ಬ್ರ್ಯಾಂಡ್‌ನ ಟ್ರ್ಯಾಕ್ಟರ್‌ ಉತ್ಪಾದನೆಯಾಗುತ್ತದೆ. ಮೂರೂ ಘಟಕಗಳಲ್ಲಿ ವಾರ್ಷಿಕ ಸರಾಸರಿ 1,58,000 ಟ್ರ್ಯಾಕ್ಟರ್‌ ಉತ್ಪಾದನೆಯಾಗುತ್ತಿದೆ.
ಸಿಹಿಸುದ್ದಿ, ಜನರಲ್ ಪ್ರಾವಿಡೆಂಟ್ ಫಂಡ್ ಬಡ್ಡಿದರ ಏರಿಕೆ
ಜನರಲ್ ಪ್ರಾವಿಡೆಂಟ್ ಫಂಡ್ (ಜಿಪಿಎಫ್) ಹಾಗೂ ಇತರೆ ಸಂಬಂಧಿತ ಯೋಜನೆಗಳ ಮೇಲಿನ ಬಡ್ಡಿದರವನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿದೆ. ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕ ಅವಧಿಯಲ್ಲಿ ಶೇ. 0.4ರಷ್ಟು ಬಡ್ಡಿದರ ಏರಿಸಲಾಗಿದ್ದು, ಈಗ ಬಡ್ಡಿದರ ಶೇ. ಜುಲೈ-ಸೆಪ್ಟಂಬರ್ ತ್ರೈಮಾಸಿಕ ಅವಧಿಯಲ್ಲಿ ಜಿಪಿಎಫ್ ಬಡ್ಡಿದರ ಶೇ. ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಬಡ್ಡಿದರ ಕೂಡ ಶೇ. ಹೊಸ ಬಡ್ಡಿದರವು 2018ರ ಅಕ್ಟೋಬರ್ 1ರಿಂದಲೇ ಅನ್ವಯವಾಗಲಿದ್ದು, ಡಿಸೆಂಬರ್ 31ಕ್ಕೆ ಕೊನೆಗೊಳ್ಳಲಿದೆ. ಕೇಂದ್ರ ಸರ್ಕಾರಿ ನೌಕರರು, ರೈಲ್ವೆ ಮತ್ತು ರಕ್ಷಣಾ ಸಿಬ್ಬಂದಿಗಳಿಗೆ ಬಡ್ಡಿದರ ಅನ್ವಯವಾಗಲಿದೆ. ಕಳೆದ ತಿಂಗಳು ಅಕ್ಟೋಬರ್-ಡಿಸೆಂಬರ್ ಅವಧಿಗೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಶೇ. 0.4 ರಷ್ಟು ಏರಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು.
ಇನ್ಫೋಸಿಸ್ 4,110 ಕೋಟಿ ನಿವ್ವಳ ಲಾಭ
ದೇಶದ ಮಾಹಿತಿ ತಂತ್ರಜ್ಞಾನ (ಐಟಿ) ದಿಗ್ಗಜ ಸಂಸ್ಥೆ ಇನ್ಫೋಸಿಸ್ ೨೦೧೮ರ ಸಾಲಿನ ಜುಲೈ-ಸೆಪ್ಟೆಂಬರ್‌ ಎರಡನೇ ತ್ರೈಮಾಸಿಕ ಅವಧಿಯಲ್ಲಿ ರೂ. 4,110 ಕೋಟಿ ನಿವ್ವಳ ಲಾಭ ಗಳಿಸಿದ್ದು, ಶೇ. ಕಳೆದ ಸಾಲಿನ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಇನ್ಫೋಸಿಸ್ ರೂ. 3,726 ಕೋಟಿ ಲಾಭ ಗಳಿಸಿತ್ತು. ಇನ್ಫೋಸಿಸ್ ನ ಒಟ್ಟು ಆದಾಯದಲ್ಲಿ ಶೇ. ಈ ಒಟ್ಟು ಆದಾಯದಲ್ಲಿ ಡಿಜಿಟಲ್‌ ಸೇವಾ ವಿಭಾಗ ಶೇ. 31ರಷ್ಟು ಪಾಲು ಹೊಂದಿದ್ದು, ರಿಟೇಲ್‌, ಹಣಕಾಸು, ಉತ್ಪಾದನೆ ವಲಯದಲ್ಲಿ ಡಿಜಿಟಲ್‌ ಸೇವೆಗೆ ಸಂಬಂಧಿಸಿ ಉತ್ತಮ ವಹಿವಾಟನ್ನು ಸಂಸ್ಥೆ ನಡೆಸಿದೆ. ಇನ್ಫೋಸಿಸ್ ಪ್ರಸ್ತುತ ತ್ರೈಮಾಸಿಕದಲ್ಲಿ 200 ಕೋಟಿ ಡಾಲರ್‌ಗೂ ಅಧಿಕ ಮೊತ್ತದ ಡೀಲ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಮೂಲಕ 10 ಲಕ್ಷ ಉದ್ಯೋಗ ಸೃಷ್ಟಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಜನ ಆರೋಗ್ಯ ಯೋಜನೆಯು ಆರೋಗ್ಯ ಮತ್ತು ವಿಮಾ ಕ್ಷೇತ್ರದಲ್ಲಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಅಧಿಕೃತ ಮೂಲ ತಿಳಿಸಿದೆ. ಈ ಯೋಜನೆಯು ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿನ ಆರೋಗ್ಯ ಸೇವೆಯ ಗುಣಮಟ್ಟವನ್ನು ಸುಧಾರಿಸಲಿದೆ ಆರೋಗ್ಯ ಯೋಜನಾ ಸಿಇಒ ಇಂದು ಭೂಷಣ್ ಅಸ್ಸೋಚಾಮ್ ಆಯೋಜಿಸಿದ್ದ ಸಮಾರಂಭದಲ್ಲಿ ತಿಳಿಸಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆ: 5 ಲಕ್ಷ ವಿಮಾ ಸೌಲಭ್ಯ ಪಡೆಯೋದು ಹೇಗೆ?.
ಆತಂಕದಿಂದಷ್ಟೇ ತೈಲ ದರ ಏರಿಕೆ: ಪ್ರಧಾನ್‌
ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಲಭ್ಯತೆ ಅಥವಾ ಪೂರೈಕೆಗೆ ಯಾವುದೇ ಕೊರತೆ ಉಂಟಾಗಿಲ್ಲ. ಆದರೆ ದೊಡ್ಡ ಪೂರೈಕೆದಾರನನ್ನು (ಇರಾನ್‌) ಕಳೆದುಕೊಳ್ಳುವ ಭೀತಿಯಿಂದ ದರ ಏರಿಕೆಯಾಗುತ್ತಿದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ. ಅಮೆರಿಕವು ಇರಾನ್‌ ವಿರುದ್ಧ ನವೆಂಬರ್‌ 4ರಿಂದ ಕಠಿಣ ಆರ್ಥಿಕ ನಿರ್ಬಂಧಗಳನ್ನು ಜಾರಿಗೊಳಿಸಲಿದ್ದು, ಇದಕ್ಕೂ ಮುನ್ನ ತೈಲ ದರಗಳು ಏರುತ್ತಿವೆ. ಆದರೆ ಇದು ಪೂರೈಕೆಯ ಕೊರತೆಯಿಂದ ಉಂಟಾಗಿದ್ದಲ್ಲ, ಬದಲಿಗೆ ದೊಡ್ಡ ಪೂರೈಕೆದಾರರೊಬ್ಬರನ್ನು ಕಳೆದುಕೊಳ್ಳುವ ಆತಂಕದಿಂದ ಉಂಟಾಗಿರುವ ಏರಿಕೆಯಾಗಿದೆ. ನಾನಾ ರಾಷ್ಟ್ರಗಳಲ್ಲಿ ಈ ಬಗ್ಗೆ ಕಳವಳ ಉಂಟಾಗಿದೆ ಎಂದು ಪ್ರಧಾನ್‌ ಹೇಳಿದರು. ಭಾರತದ ಸಾರ್ವಜನಿಕ ತೈಲ ಕಂಪನಿಗಳು ನವೆಂಬರ್‌ನಲ್ಲಿ ಇರಾನ್‌ನಿಂದ 12.5 ಲಕ್ಷ ಟನ್‌ ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿವೆ. ಕಚ್ಚಾ ತೈಲದ ದರ ಪ್ರತಿ ಬ್ಯಾರೆಲ್‌ಗೆ ಇತ್ತೀಚೆಗೆ 86 ಡಾಲರ್‌ಗೆ ಏರಿತ್ತು.
ಇನ್ಫೋಸಿಸ್‌ಗೆ 4,110 ಕೋಟಿ ರೂ. ಲಾಭ
ಐಟಿ ದಿಗ್ಗಜ ಇನ್ಫೋಸಿಸ್‌ ಕಳೆದ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ 4,110 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಶೇ.10.30ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇನ್ಫೋಸಿಸ್‌ 3,726 ಕೋಟಿ ರೂ. ಕಂಪನಿಯ ಆದಾಯದಲ್ಲಿ ಶೇ.17.30ರಷ್ಟು ಹೆಚ್ಚಳವಾಗಿದ್ದು, 20,609 ಕೋಟಿ ರೂ.ಗಳಾಗಿದೆ. ಒಟ್ಟು ಆದಾಯದಲ್ಲಿ ಡಿಜಿಟಲ್‌ ಸೇವೆಗಳ ವಿಭಾಗ ಶೇ.31ರಷ್ಟು ಪಾಲು ಕೊಟ್ಟಿದೆ. ಇನ್ಫೋಸಿಸ್‌ ಪ್ರಸಕ್ತ ಸಾಲಿನಲ್ಲಿ ಶೇ.6-8ರ ಆದಾಯ ಗಳಿಕೆಯ ಮುನ್ನೋಟವನ್ನು ಉಳಿಸಿಕೊಂಡಿದೆ. ಈ ತ್ರೈಮಾಸಿಕದಲ್ಲಿ 200 ಕೋಟಿ ಡಾಲರ್‌ಗೂ ಅಧಿಕ ಮೊತ್ತದ ಡೀಲ್‌ಗಳನ್ನು ಪಡೆಯುವಲ್ಲಿ ಕಂಪನಿ ಯಶಸ್ವಿಯಾಗಿದೆ. ರಿಟೇಲ್‌, ಹಣಕಾಸು, ಉತ್ಪಾದನೆ ವಲಯದಲ್ಲಿ ಡಿಜಿಟಲ್‌ ಸೇವೆಗೆ ಸಂಬಂಧಿಸಿ ಉತ್ತಮ ವಹಿವಾಟನ್ನು ಕಂಪನಿ ನಡೆಸಿದೆ. ಪ್ರತಿ ಉದ್ಯೋಗಿಯಿಂದ ಸರಾಸರಿ ಆದಾಯದಲ್ಲಿ 54,900 ಡಾಲರ್‌ನಿಂದ 54,700 ಡಾಲರ್‌ಗೆ ಇಳಿಕೆಯಾಗಿದೆ. ಉದ್ಯೋಗಿಗಳ ವಲಸೆ ಶೇ.22.2ರಿಂದ ಶೇ.19.9ಕ್ಕೆ ಇಳಿಕೆಯಾಗಿದೆ.
ಎಚ್‌1 ಬಿ ವೀಸಾ: ಅಮೆರಿಕ ವಿರುದ್ಧ 1000 ಕಂಪನಿಗಳ ಖಟ್ಲೆ
ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಸರಕಾರದ ಎಚ್‌-1ಬಿ ವೀಸಾ ಹೊಸ ನೀತಿಯ ವಿರುದ್ಧ ಭಾರತೀಯ ಮೂಲದ ಅಮೆರಿಕನ್ನರು ಕಾನೂನು ಸಮರ ಆರಂಭಿಸಿದ್ದಾರೆ. ಅಮೆರಿಕದಲ್ಲಿರುವ ಭಾರತೀಯ ಮೂಲದ 1 ಸಾವಿರಕ್ಕೂ ಹೆಚ್ಚು ಸಣ್ಣಪುಟ್ಟ ಐಟಿ ಕಂಪನಿಗಳನ್ನು ಪ್ರತಿನಿಧಿಸುವ ಐಟಿ ಸಂಘಟನೆಯೊಂದು ಟ್ರಂಪ್‌ ಸರಕಾರದ ವಿರುದ್ಧ ಮೊಕದ್ದಮೆ ಹೂಡಿದೆ. ಎಚ್‌-1ಬಿ ವೀಸಾದ ಅವಧಿಯನ್ನು 3 ವರ್ಷಗಳ ಅವಧಿಗೆ ಬದಲು ಸಣ್ಣ ಅವಧಿಗೆ ಸೀಮಿತಗೊಳಿಸಿರುವುದನ್ನು ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರಲಾಗಿದೆ. ಎಚ್‌-1ಬಿ ವೀಸಾದಿಂದ ಅಮೆರಿಕದ ಕಂಪನಿಗಳಿಗೆ ವಿದೇಶಿ ಮೂಲದ ಉದ್ಯೋಗಿಗಳನ್ನು ತಾಂತ್ರಿಕ ನೈಪುಣ್ಯತೆಯ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಪ್ರತಿ ವರ್ಷ ಭಾರತ ಮತ್ತು ಚೀನಾದಿಂದ ಸಹಸ್ರಾರು ಉದ್ಯೋಗಿಗಳನ್ನು ಹೀಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಸಾಮಾನ್ಯವಾಗಿ 3-6 ವರ್ಷಗಳ ಅವದಿಗೆ ಈ ವೀಸಾ ನೀಡಲಾಗುತ್ತದೆ. ಆದರೆ ಟ್ರಂಪ್‌ ಆಡಳಿತವು ವೀಸಾ ನಿಯಮಾವಳಿಗಳನ್ನು ಬಿಗಿಗೊಳಿಸಿದೆ.
GPF Interest Rate: ಜನರಲ್ ಪ್ರಾವಿಡೆಂಟ್ ಫಂಡ್‌ ಬಡ್ಡಿದರ ಹೆಚ್ಚಳ
ಜನರಲ್ ಪ್ರಾವಿಡೆಂಟ್ ಫಂಡ್‌ (ಜಿಪಿಎಫ್‌) ಮತ್ತು ಸಂಬಂಧಿತ ಇತರ ಯೋಜನೆಗಳ ಮೇಲಿನ ಬಡ್ಡಿದರವನ್ನು ಕೇಂದ್ರ ಸರಕಾರ ಅಕ್ಟೋಬರ್-ಡಿಸೆಂಬರ್ ಕ್ವಾರ್ಟರ್‌ ಅವಧಿಗೆ ಅನ್ವಯವಾಗುವಂತೆ ಶೇ. 0.4 ಅಂಶದಿಂದ 8 ರವರೆಗೆ ಏರಿಕೆ ಮಾಡಿದೆ. ಜಿಪಿಎಫ್ ಮೇಲಿನ ಬಡ್ಡಿದರ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಶೇ. 2018-19ನೇ ಅವಧಿಯಲ್ಲಿ ಜಿಪಿಎಫ್‌ ಮತ್ತು ಸಂಬಂಧಿತ ಇತರ ಫಂಡ್‌ಗಳ ಮೇಲೆ ಶೇ. 31, 2018ರ ಅವಧಿಯಿಂದ ಜಾರಿಗೆ ಬರಲಿದೆ ಎಂದು ವಾಣಿಜ್ಯ ವ್ಯವಹಾರಗಳ ಇಲಾಖೆ ಹೇಳಿದೆ. ಕೇಂದ್ರ ಸರಕಾರದ ಉದ್ಯೋಗಿಗಳು, ರೈಲ್ವೆ ಮತ್ತು ಭದ್ರತಾ ಪಡೆಗಳವರಿಗೆ ಪ್ರಾವಿಡೆಂಟ್ ಫಂಡ್ ಮೇಲೆ ಬಡ್ಡಿದರ ಅನ್ವಯವಾಗಲಿದೆ. ಕಳೆದ ತಿಂಗಳು ಸರಕಾರ ಸಣ್ಣ ಉಳಿತಾಯ, ಎನ್‌ಎಸ್‌ಸಿ, ಪಿಪಿಎಫ್‌ ಮೇಲಿನ ಬಡ್ಡಿದರವನ್ನು ಅಕ್ಟೋಬರ್-ಡಿಸೆಂಬರ್ ಅವಧಿಗೆ ಶೇ. 0.4 ಅಂಶ ಏರಿಕೆ ಮಾಡುವುದಾಗಿ ಘೋಷಿಸಿತ್ತು.
ಆಹಾರ ಉತ್ಪನ್ನ ಬೆಲೆ ಕುಸಿತ: ಮೋದಿ ಸರಕಾರಕ್ಕೆ ತೊಂದರೆ?
ಆಹಾರ ಉತ್ಪನ್ನಗಳ ಬೆಲೆ ಕುಸಿತ ಮತ್ತು ಸಗಟು ಹಣದುಬ್ಬರ ಸಮಸ್ಯೆ ಸೃಷ್ಟಿಯಾಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಸರಕಾರದ ಬಜೆಟ್‌ ಯೋಜನೆಗೆ ತೊಂದರೆಯಾಗಲಿದೆ ಎನ್ನಲಾಗಿದೆ. ತರಕಾರಿ ಮತ್ತು ದವಸಧಾನ್ಯಗಳ ಬೆಲೆ ಇಳಿಕೆಯಾಗುತ್ತಿದ್ದು, ಬೆಲೆ ಇಳಿಕೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಜತೆಗೆ ಕೃಷಿ ಆದಾಯ ಕೂಡ ಇಳಿಕೆಯಾಗುತ್ತಿರುವುದು ಕೇಂದ್ರಕ್ಕೆ ಆದಾಯದ ಕೊರತೆಯಾಗಲಿದೆ. ಒಟ್ಟಾರೆ ಆರ್ಥಿಕ ಕೊರತೆ ಸೃಷ್ಟಿಯಾಗುವುದರಿಂದ ಕೇಂದ್ರದ ಬಜೆಟ್‌ ಪ್ಲ್ಯಾನ್ ಮೇಲೆ ಪರಿಣಾಂ ಬೀರಲಿದೆ. ಕೇಂದ್ರದ ಬಜೆಟ್‌ ಪ್ಲ್ಯಾನ್ ರೂಪಿಸುವಲ್ಲಿ ಕೃಷಿ ಆದಾಯದ ಕೊರತೆಯಾದರೆ ಅದರಿಂದ ಒಟ್ಟಾರೆ ಬಜೆಟ್ ಗಾತ್ರದಲ್ಲೂ ಇಳಿಕೆಯಾಗಲಿದೆ. ಆದರೆ ಮುಂದಿನ ಬಜೆಟ್‌ ಬಳಿಕ ಲೋಕಸಭಾ ಚುನಾವಣೆ ನಡೆಯಲಿರುವುದರಿಂದ ಕೇಂದ್ರ ಬಜೆಟ್‌ ರೂಪಿಸುವಲ್ಲೂ ಎಚ್ಚರ ವಹಿಸಬೇಕಾಗುತ್ತದೆ. ಹೀಗಾಗಿ ಪ್ರಧಾನಿ ಮೋದಿಯವರ ಬಜೆಟ್ ಯೋಜನೆಗೆ ಆಹಾರ ಉತ್ಪನ್ನಗಳ ಬೆಲೆ ಇಳಿಕೆ ಮತ್ತು ಸಗಟು ಹಣದುಬ್ಬರ ಸಮಸ್ಯೆಯಾಗಲಿದೆ ಎನ್ನಲಾಗಿದೆ.
ಸಾರ್ವಜನಿಕ ಉದ್ಯಮಗಳನ್ನು ಹಿಂದಿಕ್ಕಿದ ಪ್ರೈವೇಟ್‌ ಇಂಡಸ್ಟ್ರಿ!
ಖಾಸಗಿ ವಲಯದ ಪ್ರಮುಖ ಕಂಪನಿಗಳು/ ಮಾರುಕಟ್ಟೆ ಮೌಲ್ಯ/ ಉದ್ಯೋಗಿಗಳ ಸಂಖ್ಯೆ ಬೆಂಗಳೂರು : ಸಾರ್ವಜನಿಕ ಉದ್ಯಮಗಳು ಆಧುನಿಕ ಭಾರತದ ದೇವಾಲಯಗಳಾಗಿದ್ದು, ಅವುಗಳನ್ನು ಕೇಂದ್ರ ಸರಕಾರ ನಾಶಪಡಿಸುತ್ತಿದೆ ಎಂದು ಬೆಂಗಳೂರಿನ ಎಚ್‌ಎಎಲ್‌ನ ನಿವೃತ್ತ ಉದ್ಯೋಗಿಗಳನ್ನು ಉದ್ದೇಶಿಸಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಇತ್ತೀಚೆಗೆ ಆರೋಪಿಸಿದ್ದಾರೆ. ಇದರಿಂದ ದೇಶದ ಅಭ್ಯುದಯಕ್ಕೆ ಸಾರ್ವಜನಿಕ, ಸರಕಾರಿ ಕಂಪನಿಗಳ ಕೊಡುಗೆ ಎಷ್ಟು? ಖಾಸಗಿ ಉದ್ದಿಮೆಗಳ ಪಾಲೆಷ್ಟು ಎಂಬುದರ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ಭಾರತ ಈಗ ವಿಶ್ವದಲ್ಲಿಯೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯಾಗಿ ಬೆಳೆಯಲು ಕಾರಣ ಸಾರ್ವಜನಿಕ ಉದ್ದಿಮೆಗಳಿಗೂ ಮಿಗಿಲಾಗಿ, ಖಾಸಗಿ ವಲಯದ ಉದ್ಯಮಗಳೂ ಕೊಡುಗೆ ನೀಡುತ್ತಿವೆ. ಕೇಂದ್ರದಲ್ಲಿ ಯಾವುದೇ ಸರಕಾರ ಇದ್ದರೂ, ಖಾಸಗಿ ವಲಯದ ಪ್ರಗತಿ ಅಭಾದಿತವಾಗಿದ್ದು, ಜಿಡಿಪಿಗೆ ಹೆಚ್ಚು ಕೊಡುಗೆ ನೀಡುತ್ತಿದೆ. ಲಕ್ಷಾಂತರ ಜನತೆಗೆ ಉದ್ಯೋಗಾವಕಾಶ ಕೊಟ್ಟಿವೆ. India grows at right.

Want to stay updated ?

x

Download our Android app and stay updated with the latest happenings!!!


90K+ people are using this