facebook pixel
chevron_right Entertainment
transparent
#MeToo: ನನ್ನ ವಿರುದ್ಧ ಆರೋಪ ನಿರಾಧಾರ, ಸುಳ್ಳು: ನಾನಾ ಪಾಟೇಕರ್
ತನುಶ್ರೀ ದತ್ತ ಮಾಡಿರುವ ಆರೋಪದ ಬಗ್ಗೆ ವಿವರಣೆ ನೀಡುವಂತೆ ಸಿನಿ ಹಾಗೂ ಟಿವಿ ಕಲಾವಿದರ ಸಂಘ ನಾನಾ ಪಾಟೇಕರ್ ಗೆ ನೋಟಿಸ್‌ ನೀಡಿದೆ. ಈ ನೋಟಿಸ್‌ಗೆ ಪ್ರತಿಕ್ರಿಯೆ ನೀಡಿರುವ ನಾನಾ ಪಾಟೇಕರ್, ಇದೊಂದು ಆಧಾರ ತಹಿತ ಹಾಗೂ ಸುಳ್ಳು ಆರೋಪ ಎಂದು ಹೇಳಿದ್ದಾರೆ. ಮೀ ಟೂ ಅಭಿಯಾನದ ಲೈಂಗಿಕ ಕಿರುಕುಳದ ಆರೋಪದ ಬಗ್ಗೆ ತಮ್ಮ ಅಭಿಪ್ರಾಯ ಹಾಗೂ ವಿವರಗಳನ್ನು ಸಲ್ಲಿಸುವಂತೆ ಸಂಘ ಹೇಳಿದೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ್ದ ಸಿನಿ ಹಾಗೂ ಟಿವಿ ಕಲಾವಿದರ ಸಂಘ, ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ವಿಚಾರಣೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು. ತನುಶ್ರೀ ದತ್ತ ಅವರ ಆರೋಪದಲ್ಲಿ ಸತ್ಯಾಂಶಗಳೇ ಇಲ್ಲ.
#MeToo ಕಥೆ ಇಲ್ಲದ ಮಹಿಳೆಯರಿಲ್ಲ: ರೇಣುಕಾ ಶಹಾನೆ
#MeToo ಅಭಿಯಾನ ದೇಶಾದ್ಯಂತ ಬಿರುಗಾಳಿಯನ್ನೇ ಸೃಷ್ಟಿಸಿದ್ದು, ಹಲವು ಖ್ಯಾತನಾಮರ ಹೆಸರನ್ನು ಬಯಲಿಗೆಳೆದಿದೆ. ಆದರೆ ಬಾಲಿವುಡ್ ನಟಿ ರೇಣುಕಾ ಶಹಾನೆ ಹೇಳುವ ಪ್ರಕಾರ ಇಲ್ಲಿಯವರೆಗೆ ಬೆಳಕಿಗೆ ಬಂದ ಕಥೆಗಳ ಸಂಖ್ಯೆ ಏನೂ ಇಲ್ಲ. ಅಸಂಖ್ಯಾತ ಕಥೆಗಳು ಬಹಿರಂಗವಾಗಬೇಕಿದ್ದು, ನಾವು ಕೇಳಲಿಕ್ಕಿರುವುದು ಬಹಳಷ್ಟಿದೆ. ಟಲಿಫೋನ್ ಸಂದರ್ಶನವೊಂದರಲ್ಲಿ ಮಾತನಾಡುತ್ತ, ಆಂದೋಲನದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, #MeToo ಕಥೆ ಹೊಂದಿರದ ಮಹಿಳೆಯರೇ ಇಲ್ಲ. ಆದರೆ ನನ್ನ ಕಥೆ ಯಾವುದೇ ಪ್ರಸಿದ್ಧ ವ್ಯಕ್ತಿಯನ್ನು ಒಳಗೊಂಡಿಲ್ಲ. ಬಹಳ ವರ್ಷಗಳ ಹಿಂದೆ ನನ್ನ ಜೀವನದಲ್ಲಿ ಸಹ ಕಹಿ ಘಟನೆಯೊಂದು ನಡೆದಿತ್ತು ಮತ್ತು ದೀರ್ಘ ಸಮಯದವರೆಗೆ ನನ್ನನ್ನು ಅದು ಕಾಡಿತ್ತು. ಆ ಕರಾಳತೆ ನನ್ನ ಮೇಲೆ ಮಾಡಿರುವ ಪರಿಣಾಮ ಅಗಾಧ, ಎಂದು ಹೇಳಿಕೊಂಡಿದ್ದಾರೆ. ನನ್ನ ಜೀವನದ ಹೆಚ್ಚಿನ ಸಮಯವನ್ನು ಲೋಕಲ್ ಟ್ರೈನ್ ಮತ್ತು ಬಸ್‌ ಪ್ರಯಾಣದಲ್ಲಿ ಕಳೆದಿದ್ದೇನೆ.
ನಟ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ #MeToo ಆರೋಪ
ಶ್ರುತಿ ಹರಿಹನ್ ಫೇಸ್‍ಬುಕ್ ಪುಟ. ಶ್ರುತಿ ಹರಿಹರನ್ ಫೇಸ್‍ಬುಕ್ ಪುಟದ ಒಂದು ಭಾಗ. ಸದ್ಯಕ್ಕೆ ಸ್ಯಾಂಡಲ್‌ವುಡ್ ನಟಿಯರು #MeToo ಅಭಿಯಾನದ ಮೂಲಕ ತಮಗಾದ ಕೆಟ್ಟ ಅನುಭವಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಳ್ಳುತ್ತಿದ್ದಾರೆ. ಇದೀಗ ನಟಿ ಶ್ರುತಿ ಹರಿಹರನ್ ಸಹ ಈ ಬಗ್ಗೆ ಮೌನ ಮುರಿದಿದ್ದಾರೆ. ಅವರು ಆರೋಪ ಹೊರಿಸಿರುವುದು ಆ್ಯಕ್ಷನ್ ಕಿಂಗ್ ಎಂದೇ ಹೆಸರಾಗಿರುವ ನಟ ಅರ್ಜುನ್ ಸರ್ಜಾ ವಿರುದ್ಧ. ಈ ಬಗ್ಗೆ ತಮ್ಮ ಫೇಸ್‍ಬುಕ್‌ನಲ್ಲಿ ಸುದೀರ್ಘ ಪತ್ರವನ್ನು ಬರೆದುಕೊಂಡಿದ್ದಾರೆ ಶ್ರುತಿ ಹರಿಹರನ್. ಅದರಲ್ಲಿ ಮಿ ಟೂ ಅಭಿಯಾನದಿಂದಾಗಿ ಮಹಿಳೆಯರು ಮುಂದೆ ಬಂದು ತಮ್ಮ ಕರಾಳ ಪುಟಗಳನ್ನು ತೆರೆದಿಡುತ್ತಿರುವ ಬಗ್ಗೆ, ಚಿತ್ರರಂಗದಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್, ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ತಮಗೂ ಆ ರೀತಿಯ ಸಾಕಷ್ಟು ಕೆಟ್ಟ ಸನ್ನಿವೇಶಗಳು ಎದುರಾಗಿವೆ. ಆದರೆ ಎಲ್ಲವನ್ನೂ ಚಾಕಚಕ್ಯತೆಯಿಂದ ನಿಭಾಯಿಸಿದ್ದೇನೆ ಎಂದಿದ್ದಾರೆ.
ಮೊದಲ ಮದಕರಿಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್‌
ಹಲವು ತಿಂಗಳುಗಳಿಂದ ಸ್ಯಾಂಡಲ್‌ವುಡ್‌ನಲ್ಲಿ 'ವೀರ ಮದಕರಿ ನಾಯಕ' ಚಿತ್ರದ್ದೇ ಸುದ್ದಿ. ದರ್ಶನ್‌ ಮತ್ತು ಸುದೀಪ್‌ ಇಬ್ಬರೂ ಇದೇ ಕಥೆಯನ್ನು ಹೊಂದಿರುವ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯು ವಿವಾದಕ್ಕೂ ಕಾರಣವಾಗಿತ್ತು. ಈ ನಡುವೆ ಯಾರು ಮೊದಲು ಈ ಚಿತ್ರವನ್ನು ಶುರು ಮಾಡಲಿದ್ದಾರೆ ಎಂಬ ಕುತೂಹಲ ಕೂಡ ಮೂಡಿತ್ತು. ದರ್ಶನ್‌ ನಟನೆಯ 'ಗಂಡುಗಲಿ ಮದಕರಿ ನಾಯಕ' ಸಿನಿಮಾದ ಕೆಲಸಗಳು ಈಗಾಗಲೇ ಶುರುವಾಗಿದ್ದು, ಈ ವರ್ಷದ ಒಳಗೆ ಚಿತ್ರ ಸೆಟ್ಟೇರುವ ಸಾಧ್ಯತೆಯಿದೆ. 'ಈಗಾಗಲೇ ಚಿತ್ರದ ಕೆಲಸ ಶುರು ಮಾಡಿದ್ದೇವೆ. ಚಿತ್ರದಲ್ಲಿ ಏಳು ಹಾಡುಗಳಿದ್ದು ಹಂಸಲೇಖ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಅಲ್ಲದೇ, ಅರುಣ್‌ ಸಾಗರ್‌ ಕಲಾ ನಿರ್ದೇಶಕರು. ಈಗಾಗಲೇ ಒಂದು ಹಂತದ ಸ್ಕ್ರಿಪ್ಟ್‌ ರೆಡಿಯಾಗಿದೆ. ಇನ್ನೂ ಮೂರು ರೌಂಡ್‌ನಲ್ಲಿ ಸ್ಕ್ರಿಪ್ಟ್‌ ಕೆಲಸ ನಡೆಯಬೇಕು.
#MeToo ಆರೋಪ ಹೊತ್ತಿರುವ ಅನಿರ್ಬನ್ ಆತ್ಮಹತ್ಯೆಗೆ ಯತ್ನ
ಲೈಂಗಿಕ ದೌರ್ಜನ್ಯದ ಬಗ್ಗೆ ಧ್ವನಿ ಎತ್ತುತ್ತಿರುವ #MeToo ಅಭಿಯಾನದ ಆರೋಪ ಹೊತ್ತಿರುವ ಸೆಲೆಬ್ರಿಟಿ ಮ್ಯಾನೇಜ್‌ಮೆಂಟ್ ಏಜೆನ್ಸಿ ಕ್ವಾನ್ ಎಂಟರ್‌ಟೇನ್‌ಮೆಂಟ್ ಸಹ ವ್ಯವಸ್ಥಾಪಕ ಅರ್ನಿರ್ಬನ್ ಬ್ಲಾ ಗುರುವಾರ ರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತ್ಮಹತ್ಯೆ ಯತ್ನಕ್ಕೂ ಮೊದಲು ಅವರು ಬರೆದಿರುವ ಸೂಸೈಡ್ ನೋಟ್ 'ಟೈಮ್ಸ್ ಆಫ್ ಇಂಡಿಯಾ' ವರದಿಗಾರಿಗೆ ಲಭಿಸಿದೆ. ಹಾಗಾಗಿ ವರದಿಗಾರರು ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮುಂಬೈನ ಹಳೆ ವಷಿ ಸೇತುವೆ ಬಳಿಕ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅವರು ಆ ಪತ್ರದಲ್ಲಿ ಬರೆದಿದ್ದರು. ವಿಷಯವನ್ನು ಟೈಮ್ಸ್ ಆಫ್ ಇಂಡಿಯಾ ವರದಿಗಾರ ಜಂಟಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ದೇವೇನ್ ಭಾರತಿಗೆ ತಿಳಿಸಿದ್ದರು. ಇದರಿಂದ ಭಾರತಿ ಅವರು ನವಿ ಮುಂಬೈ ಪೊಲೀಸರನ್ನು ಅಲರ್ಟ್ ಮಾಡಿದ್ದರು. ಕೂಡಲೆ ಎಚ್ಚೆತ್ತುಕೊಂಡ ಪೊಲೀಸರು ಅನಿರ್ಬನ್ ಮನೆಗೆ ಹೋಗಿ ಅವರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದರು.
#MeToo: ಬಹುಭಾಷಾ ನಟ ಅರ್ಜುನ್‌ ಸರ್ಜಾ ವಿರುದ್ಧ ಶೃತಿ ಹರಿಹರನ್‌ ಆರೋಪ
ದೇಶಾದ್ಯಂತ ಲೈಂಗಿಕ ದೌರ್ಜನ್ಯದ ವಿರುದ್ಧ ಬಿರುಗಾಳಿಯನ್ನೇ ಎಬ್ಬಿಸಿರುವ ಮೀ ಟೂ ಅಭಿಯಾನವು ಸ್ಯಾಂಡಲ್‌ವುಡ್‌ನಲ್ಲೂ ಭಾರಿ ಸದ್ದು ಮಾಡುತ್ತಿದ್ದು, ನಟಿ ಶೃತಿ ಹರಿಹರನ್‌ ಇದೀಗ ಹೊಸ ಬಾಂಬ್‌ ಸಿಡಿಸಿದ್ದಾರೆ. ರಾಷ್ಟ್ರೀಯ ಸುದ್ದಿವಾಹಿನಿಯಲ್ಲಿ ನಡೆಸಿದ್ದ ಸಂದರ್ಶನದ ವೇಳೆ ಕನ್ನಡ ಚಿತ್ರರಂಗದಲ್ಲಿಯೂ ಕಾಸ್ಟಿಂಗ್‌ ಕೌಚ್‌ ಇದೆ ಎಂದು ಮೊದಲ ಬಾರಿಗೆ ಹೇಳಿದ್ದ ನಟಿ ಶೃತಿಹರಿಹರನ್‌ ಇದೀಗ ಹಿರಿಯ ಬಹುಭಾಷಾ ನಟ ಅರ್ಜುನ್‌ ಸರ್ಜಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ವಾರಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಶ್ರುತಿ ಹರಿಹರನ್‌ ಅವರು ನಟ ಅರ್ಜುನ್ ಸರ್ಜಾ ವಿರುದ್ಧ ಮೀ ಟೂ ಆರೋಪ ಹೊರಿಸಿದ್ದಾರೆ. ಅರ್ಜುನ್‌ ಸರ್ಜಾ ಅವರ ಜತೆ ವಿಸ್ಮಯ ಸಿನಿಮಾದಲ್ಲಿ ನಟಿಸುವಾಗ ತನಗಾದ ಕೆಟ್ಟ ಅನುಭವಗಳ ಕುರಿತು ಹೇಳಿಕೊಂಡಿರುವ ಅವರು, ಸರ್ಜಾ ಅವರ ಜತೆ ನಟಿಸುವಾಗ ಕೆಟ್ಟ ಅನುಭವವಾಗಿತ್ತು. ತಮ್ಮ ಗಡಿರೇಖೆಯನ್ನೂ ದಾಟಿ ನನ್ನ ಜತೆ ವರ್ತಿಸಿದ್ದರು.
'ದಿ ವಿಲನ್' ಬೆಡಗಿ ಆ್ಯಮಿ ಜಾಕ್ಸನ್‌ ವಿರುದ್ಧ ಕನ್ನಡ ಚಿತ್ರರಸಿಕರು ಗರಂ
ಆ್ಯಮಿ ಜಾಕ್ಸನ್ ಟ್ವೀಟ್ ಸ್ಯಾಂಡಲ್‌ವುಡ್‌ನ ಬಹು ತಾರಾಗಣದ, ಬಹುನಿರೀಕ್ಷಿತ ದಿ ವಿಲನ್ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಈ ಚಿತ್ರದ ನಾಯಕಿ ಆ್ಯಮಿ ಜಾಕ್ಸನ್ ಟ್ವಿಟರ್‌ನಲ್ಲಿ ಒಂದು ಸಣ್ಣ ತಪ್ಪು ಮಾಡಿದ್ದಾರೆ. ಇಂದು 'ದಿ ವಿಲನ್' ಸಿನಿಮಾ ರಿಲೀಸ್ ಆಗ್ತಿದೆ. ಕಾಲಿವುಡ್‌ನಲ್ಲಿ ಅವಕಾಶ ಕೊಟ್ಟಂತಹ ಪ್ರೇಮ್ ಜಿ ಅವರಿಗೆ ತುಂಬಾ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದರು. ಈ ಬಗ್ಗೆ ಸ್ಯಾಂಡಲ್‍ವುಡ್ ಚಿತ್ರರಸಿಕರು ಗರಂ ಆಗಿ, ಆ್ಯಮಿ ಜಾಕ್ಸನ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕರ್ನಾಟಕ ರಾಜ್ಯ-ರಾಜಧಾನಿ-ಬೆಂಗಳೂರು, ಅಧಿಕೃತ ಭಾಷೆ-ಕನ್ನಡ, ಚಿತ್ರೋದ್ಯಮ-ಸ್ಯಾಂಡಲ್‍ವುಡ್ ಎಂದು ಕೆಲವರು ಟ್ವೀಟ್ ಎಚ್ಚರಿಸಿದ್ದಾರೆ. ಬಳಿಕ ಎಚ್ಚೆತ್ತುಕೊಂಡ ಆ್ಯಮಿ ಜಾಕ್ಸನ್, ಓಹ್ ಎಷ್ಟೊಂಡು ವುಡ್‌ಗಳು ಬಾಲಿವುಡ್, ಟಾಲಿವುಡ್, ಕಾಲಿವುಡ್ ಈಗ ಸ್ಯಾಂಡಲ್‍ವುಡ್. ದಿ ವಿಲನ್ ಚಿತ್ರದಲ್ಲಿ ಭಾಗಿಯಾಗಿದ್ದರೆ ಧನ್ಯವಾದಗಳು ಎಂದಿದ್ದಾರೆ.
ಲಾಜಿಕ್ ಮರೆತು ಅಬ್ಬರಿಸುವ ವಿಲನ್
ಅಭಿಮಾನಿಗಳನ್ನು ರಂಜಿಸಲು ಅಗತ್ಯವಾದ ಕಮರ್ಷಿಯಲ್ ಅಂಶಗಳನ್ನು ಹೇರಳವಾಗಿ ತಂದು 'ದಿ ವಿಲನ್' ಚಿತ್ರದಲ್ಲಿ ಸುರಿದಿದ್ದಾರೆ ನಿರ್ದೇಶಕ ಪ್ರೇಮ್ ರೋಚಕ ಎನಿಸುವ ಸಾಹಸ ಸನ್ನಿವೇಶಗಳು, ತಾಯಿ ಸೆಂಟಿಮೆಂಟ್, ಅಲ್ಪ-ಸ್ವಲ್ಪ ಹಾಸ್ಯದ ಹೊನಲು, ವಿದೇಶಿ ಲೊಕೇಷನ್​ಗಳು, ಓಡುವ ಕಥೆಯಲ್ಲಿ ಅಚಾನಕ್ ಆಗಿ ಸಿಗುವ ಟ್ವಿಸ್ಟ್​ಗಳು, ಮನಸೆಳೆಯುವ ಹಾಡುಗಳು. ಆದರೆ ಅವುಗಳನ್ನು ಸೂಕ್ತ ಹದದಲ್ಲಿ ಪೋಣಿಸುವಾಗ ನಿರ್ದೇಶಕರು ಎಡವಿದ್ದಾರೆ ಎನಿಸುತ್ತದೆ. 2 ಗಂಟೆ 55 ನಿಮಿಷಗಳು ಸಾಗುವ ಈ ದೀರ್ಘಾವಧಿ ಚಿತ್ರದಲ್ಲಿ ಲಾಜಿಕ್ ಎಂಬುದೇ ನಾಪತ್ತೆ. ಎರಡು ಗೆಟಪ್​ಗಳಲ್ಲಿ ಕಾಣಿಸಿಕೊಳ್ಳುವ ಶಿವರಾಜ್​ಕುಮಾರ್ ಹಾಗೂ ಹತ್ತಾರು ಬಗೆಯ ಕಾಸ್ಟ್ಯೂಮ್ಲ್ಲಿ ಮಿಂಚುವ ಸುದೀಪ್ ಅವರವರ ಅಭಿಮಾನಿಗಳಿಗೆ ಇಷ್ಟವಾಗುತ್ತಾರೆ. ತಾಯಿ ಪಾತ್ರಗಳಲ್ಲಿರುವ ಶರಣ್ಯಾ ಅಭಿನಯ ಮೆಚ್ಚುವಂತಿದೆ. ನಾಯಕಿ ಆಮಿ ಜಾಕ್ಸನ್ ನಟನೆ ಯಾಂತ್ರಿಕ. ಗ್ರಾಫಿಕ್ಸ್ ಕೆಲಸಗಳು ಸಿನಿಪ್ರಿಯರಿಗೆ ಹಿಡಿಸದೆ ಇರಬಹುದು. ಹಾಡುಗಳಿಗೂ ಕಥೆಗೂ ದೂರದ ಸಂಬಂಧ.
ಮತ್ತೆ ಬಂದ್ರು ಡ್ರಾಮಾ ಜೂನಿಯರ್ಸ್
ಈಗಾಗಲೇ ಯಶಸ್ಸು ಕಂಡಿರುವ ಜೀ ಕನ್ನಡ ವಾಹಿನಿಯ 'ಡ್ರಾಮಾ ಜೂನಿಯರ್ಸ್' ರಿಯಾಲಿಟಿ ಶೋ ಮತ್ತೆ ಬರುತ್ತಿದೆ. ಸೀಸನ್ 3ಕ್ಕೆ ತಯಾರಿಗಳು ನಡೆದಿದ್ದು, ಅ.20ರಂದು ಪ್ರಸಾರ ಆರಂಭಿಸಲಿದೆ. ರಾಜ್ಯದ 30 ಜಿಲ್ಲೆಗಳಲ್ಲಿ ಆಡಿಷನ್ ಮಾಡಿ, ಅದರಲ್ಲಿ ನಟನಾ ಕೌಶಲ್ಯವುಳ್ಳ 30 ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅವರೆಲ್ಲರೂ ಮೆಗಾ ಆಡಿಷನ್​ಗೆ ಪ್ರವೇಶ ನೀಡಲು ಸಜ್ಜಾಗಿದ್ದಾರೆ. ಕಾರ್ಯಕ್ರಮದ ತೀರ್ಪಗಾರರಾಗಿ ಹಿರಿಯ ನಟಿ 'ಜೂಲಿ' ಲಕ್ಷ್ಮಿ, ಮುಖ್ಯಮಂತ್ರಿ ಚಂದ್ರು ಹಾಗೂ ವಿಜಯ ರಾಘವೇಂದ್ರ ಕೆಲಸ ನಿರ್ವಹಿಸಲಿದ್ದಾರೆ. ಆನಂದ್ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪುಟಾಣಿಗಳ ಈ ಶೋ ಪ್ರಸಾರವಾಗಲಿದೆ.
ಗಯ್ಯಾಳಿ ಪಾತ್ರದಿಂದ ಸುಕೃತಾಗೆ ಮುಕ್ತಿ!
ತೆರೆಮೇಲೆ ಗಯ್ಯಾಳಿತನದಿಂದಲೇ ಫೇಮಸ್ ಆಗಿದ್ದರು ನಟಿ ಸುಕೃತಾ ವಾಗ್ಳೆ. 'ಕಿರಗೂರಿನ ಗಯ್ಯಾಳಿಗಳು' ಚಿತ್ರದಲ್ಲಿ ಅವರು ಅಬ್ಬರಿಸಿದ ಪರಿ ಕಂಡು ಪ್ರೇಕ್ಷಕರು ಫಿದಾ ಆಗಿದ್ದರು. ಇತ್ತೀಚೆಗೆ ತೆರೆಕಂಡ 'ಮೇಘಾ ಅಲಿಯಾಸ್ ಮ್ಯಾಗಿ' ಚಿತ್ರದಲ್ಲೂ ಸುಕೃತಾಗೆ ಗಂಡುಭೀರಿ ಪಾತ್ರವಿತ್ತು. ಇದೆಲ್ಲದರ ಪರಿಣಾಮ, ನಂತರದಲ್ಲಿ ಅವರಿಗೆ ಸಿಗುತ್ತಿದ್ದ ಪಾತ್ರಗಳೆಲ್ಲವೂ ಗಯ್ಯಾಳಿತನವನ್ನೇ ಬೇಡುತ್ತಿದ್ದವಂತೆ. ಇದರ ನಡುವೆ ಗ್ಲಾಮರಸ್ ಪಾತ್ರ ಮಾಡಬೇಕು ಎಂಬುದು ಸುಕೃತಾ ಆಸೆಯಾಗಿತ್ತು. ಅದಕ್ಕೀಗ ಪಕ್ಕದ ಟಾಲಿವುಡ್​ನಲ್ಲಿ ವೇದಿಕೆ ಸಿದ್ಧವಾಗಿದೆ. ಅಂದರೆ, 'ರಾಮ ಚಕ್ಕನಿ ಸೀತಾ' ಎಂಬ ತೆಲುಗು ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಅವರಿಗೆ ಒಲಿದುಬಂದಿದ್ದು, ಅದರಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಸಿನಿಮಾ ಮೂಲಕ ಸುಕೃತಾ ಟಾಲಿವುಡ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ. 'ರಾಮ ಚಕ್ಕನಿ ಸೀತಾ' ಶೀರ್ಷಿಕೆ ಕೇಳಿದರೆ ಇದು ರಾಮಾಯಣಕ್ಕೆ ಸಂಬಂಧಿಸಿದ ಕಥೆ ಎನಿಸುವುದು ಸಹಜ, ಆದರೆ ಅಸಲಿ ವಿಷಯವೇ ಬೇರೆ.
ಅಕ್ಷಯ್-ವಿದ್ಯಾ ಮಂಗಳಯಾನ
'ಹೇ ಬೇಬಿ' ಮತ್ತು 'ಭೂಲ್ ಭುಲಯ್ಯ' ಚಿತ್ರಗಳಲ್ಲಿ ಅಕ್ಷಯ್ ಕುಮಾರ್ ಮತ್ತು ವಿದ್ಯಾ ಬಾಲನ್ ಜತೆಯಾಗಿ ನಟಿಸಿದ್ದರು. ಬಹುವರ್ಷಗಳ ಬಳಿಕ ಈ ಜೋಡಿಯನ್ನು ಬೆಳ್ಳಿಪರದೆ ಮೇಲೆ ಒಂದಾಗಿಸಲು ಈಗ ಮತ್ತೆ ಪ್ಲಾ್ಯನ್ ಸಿದ್ಧಗೊಳ್ಳುತ್ತಿದೆ. ಭಾರತ 2013ರಲ್ಲಿ ಮಂಗಳಗ್ರಹಕ್ಕೆ ಉಪಗ್ರಹ ಉಡಾವಣೆ ಮಾಡಿದ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ಆರ್. ಬಾಲ್ಕಿ ನಿರ್ದೇಶನ ಮಾಡಲಿರುವ ಸಿನಿಮಾದಲ್ಲಿ ವಿದ್ಯಾ ಮತ್ತು ಅಕ್ಷಯ್ ಕುಮಾರ್ ತೆರೆಹಂಚಿಕೊಳ್ಳಲಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ. ಇಬ್ಬರೂ ಜತೆಯಾಗಿ ನಟಿಸುತ್ತಾರೆ ಎಂದ ಮಾತ್ರಕ್ಕೆ ಅವರು ಪ್ರೇಮಿಗಳಾಗಿಯೋ ಅಥವಾ ಗಂಡ-ಹೆಂಡತಿ ಆಗಿಯೋ ಕಾಣಿಸಿಕೊಳ್ಳುತ್ತಾರೆ ಎಂದುಕೊಳ್ಳುವಂತಿಲ್ಲ. ಮೂಲಗಳ ಪ್ರಕಾರ, ವಿದ್ಯಾಗೆ ಇಲ್ಲಿ ವಿಜ್ಞಾನಿ ಪಾತ್ರ ನೀಡಲಾಗಿದೆಯಂತೆ. ಅದಕ್ಕಾಗಿ ಅವರು ಡಿಸೆಂಬರ್ ತಿಂಗಳಿನಿಂದ ತರಬೇತಿಯನ್ನೂ ಪಡೆಯಲಿದ್ದಾರೆ. ಇನ್ನು, ಈವರೆಗೂ ಡಿಫರೆಂಟ್ ಸಿನಿಮಾಗಳನ್ನೇ ಮಾಡಿಕೊಂಡು ಬಂದಿರುವ ಆರ್.
ಶಿವಣ್ಣನ ಪಾತ್ರ ಗೆಲ್ಲಬೇಕೆಂದು ಆ ದೃಶ್ಯ ಮಾಡಿದ್ದು: ಪ್ರೇಮ್​
ಶಿವಣ್ಣನ ಅಭಿಮಾನಿಗಳಿಗೆ ನೋವಾಗಿದ್ದರೆ ಕ್ಷಮಿಸಿ. ದಯವಿಟ್ಟು ಸಿನಿಮಾವನ್ನು ಸಿನಿಮಾ ರೀತಿ ನೋಡಿ ಎಂದು ದಿ ವಿಲನ್​ ಚಿತ್ರ ನಿರ್ದೇಶಕ ಪ್ರೇಮ್​ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಸಿನಿಮಾದಲ್ಲಿ ಶಿವಣ್ಣನಿಗೆ ಸುದೀಪ್ ಹೊಡೆದಿದ್ದಾರೆ. ಮತ್ತೆ ತಿರುಗಿ ಶಿವಣ್ಣ ಹೊಡೆದಿಲ್ಲ ಎಂದು ಕೇಳುತ್ತಿದ್ದೀರಾ? ಶಿವಣ್ಣ ಮತ್ತೆ ಹೊಡೆದಿದ್ರೆ ಪಾತ್ರ ಗೆಲ್ಲುತ್ತಿರಲಿಲ್ಲ. ಅಭಿಮಾನಿಗಳಿಗೆ ನೋವಾಗಬೇಕು ಅಂತ ಮಾಡಿಲ್ಲ. ನಾನು ಶಿವಣ್ಣನನ್ನು ಹೆಚ್ಚು ಪ್ರೀತಿಸುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರೇಮ್ ಪ್ರತಿಕ್ರಿಯಿಸಿದ್ದಾರೆ. ವಿವಾದ ಆಗಿರುವುದು ಸೋಷಿಯಲ್ ಮೀಡಿಯಾಗಳಿಂದ ಎಂದು ಗೊತ್ತಾಯಿತು. ಹಾಗಾಗಿ ನಾನು ಅಭಿಮಾನಿಗಳಲ್ಲಿ ಮನವಿ ಮಾಡುತ್ತೇನೆ, ಸಿನಿಮಾ ಹಿಟ್ ಆಗುತ್ತಿದೆ ಎಂದರೆ ಅದು ನಿಮ್ಮಿಂದಲೇ. ಶಿವಣ್ಣನನ್ನು ರಾಕ್ಷಸನ ರೀತಿ ತೋರಿಸಲು ಸಾಧ್ಯವಿಲ್ಲ. ಅವರ ಇಮೇಜ್ ಅನ್ನು ಹಾಳು ಮಾಡಲು ಸಾಧ್ಯವಿಲ್ಲ. ನಿಮಗೆ ನೋವಾಗಿದ್ದರೆ ಕ್ಷಮಿಸಿ ಎಂದಿದ್ದಾರೆ.
ದಚ್ಚು ಜತೆಗಿನ ವೈ ಮನಸ್ಸು ಬೇಗ ಸರಿಯಾಗಲಿ ಎಂದು ಬಯಸುತ್ತಿದ್ದಾರಂತೆ ಕಿಚ್ಚ ಸುದೀಪ!
ಸ್ಯಾಂಡಲ್​ವುಡ್​ ಸ್ಟಾರ್​ಗಳಾದ ಕಿಚ್ಚ ಸುದೀಪ ಮತ್ತು ಚಾಲೆಂಜಿಂಗ್​ ಸ್ಟಾರ್ ದರ್ಶನ್ ಗೆಳೆತನ ಹಳಸಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೀಗ ಕಿಚ್ಚ ತನ್ನ ಕುಚುಕು ಗೆಳೆಯನೊಂದಿಗಿನ ಸಂಬಂಧ ಬೇಗ ಸರಿಯಾಗಲಿ ಎಂದು ಬಯಸುತ್ತಿದ್ದಾರೆ. ಹೌದು, ಈ ವಿಷಯವನ್ನು ಸ್ವತಃ ಕಿಚ್ಚ ಸುದೀಪ್​ ಹೇಳಿಕೊಂಡಿದ್ದು ರಾಜನಹಳ್ಳಿಯಲ್ಲಿ ಮಾತನಾಡಿ, ನನ್ನ, ದರ್ಶನ್ ನಡುವಿನ ಸ್ನೇಹ ಸ್ವಲ್ಪ ಹಾಳಾಗಿದೆ. ಆದರೆ, ಅದು ಸೇತುವೆಯಾಗಿ, ಗೋಡೆಯಾಗಿ ಬೆಳೆದು ನಿಂತು ಏನೇನೋ ಆಗುತ್ತಿದೆ. ಸ್ನೇಹದ ವಾತಾವರಣ ಸರಿಯಾಗಲು ಕಾಲ ಕೂಡಿ ಬರಬೇಕು. ನಾವು ಶತ್ರುಗಳಲ್ಲ, ಯಾವತ್ತೂ ಒಳ್ಳೆಯದನ್ನೇ ಬಯಸುತ್ತೇವೆ. ಮಾಧ್ಯಮದವರು ಇದನ್ನು ಸರಿಪಡಿಸಿ ಎಂದು ಸುದೀಪ್ ಮನವಿ ಮಾಡಿದ್ದಾರೆ. ಒಳ್ಳೆಯ ಕಥೆ ಸಿಕ್ಕಿ, ಇಬ್ಬರೂ ಒಪ್ಪಿದರೆ ನಾನು ದಚ್ಚು ಒಟ್ಟಿಗೆ ಅಭಿನಯಿಸುತ್ತೇವೆ. ಇಬ್ಬರೂ ಒಟ್ಟಾಗಿ ಸಿನಿಮಾ ಮಾಡಬಾರದು ಎಂದೇನಿಲ್ಲ ಎಂದು ದಚ್ಚು ಬಗ್ಗೆ ಮನದಾಳದ ಮಾತುಗಳನ್ನಾಡಿದರು.
#MeToo: ಸಂಜನಾ ಗಲ್‍ರಾಣಿ ಹಂಚಿಕೊಂಡ ಕರಾಳ ಅನುಭವ
ಎಲ್ಲಾ ಚಿತ್ರೋದ್ಯಮಗಳಲ್ಲೂ #Metoo ಅಭಿಯಾನದ ಧ್ವನಿ ಮಾರ್ದನಿಸುತ್ತಿದೆ. ಸ್ಯಾಂಡಲ್‍ವುಡ್ ಸಹ ಇದಕ್ಕೆ ಹೊರತಲ್ಲ. ಇಲ್ಲೂ ಹಲವಾರು ನಟಿಯರು ತಮಗಾದ ಕಹಿ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಇದೀಗ ನಟಿ ಸಂಜನಾ ಗಲ್‍ರಾಣಿ ಸಹ ಗಂಡ ಹೆಂಡತಿ ಚಿತ್ರೀಕರಣದಲ್ಲಾದ ಕರಾಳ ಘಟನೆಗಳ ಬಗ್ಗೆ ಬಾಯ್ಬಿಟ್ಟಿದ್ದಾರೆ. ಈ ಬಗ್ಗೆ ತಮ್ಮ ಫೇಸ್‍ಬುಕ್‌ನಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆ ಸಿನಿಮಾ ಮಾಡಬೇಕಾದರೆ ನಾನಿನ್ನೂ ಕಾಲೇಜು ವಿದ್ಯಾರ್ಥಿನಿ. ತಾನು ಕಾಲೇಜಿಗೆ ಕಾರಿನಲ್ಲಿ ಹೋಗಬೇಕು ಎಂಬ ಆಸೆ ಇತ್ತು. ಆಗ ಜೆನ್ ಕಾರು ತೆಗೆದುಕೊಳ್ಳಬೇಕು ಎಂದುಕೊಂಡಿದ್ದೆ. ಆ ಸಿನಿಮಾಗೆ ಸಂಭಾವನೆ 2.50 ಲಕ್ಷ ರೂ. ನಿಮ್ಮನ್ನು ಮನೆ ಮಗಳ ತರಹ ನೋಡಿಕೊಳ್ತೀವಿ. ನಮ್ಮ ಮನೆಯಲ್ಲೂ ಹೆಣ್ಣು ಮಕ್ಕಳಿದ್ದಾರೆ ಎಂದರು. ಒಂದೆರಡು ದಿನ ಶೂಟಿಂಗ್ ಚೆನ್ನಾಗಿಯೇ ನಡೆಯಿತು.
ಸ್ಯಾಂಡಲ್‌ವುಡ್‌ ಬದಲು ಕಾಲಿವುಡ್‌ಗೆ ಧನ್ಯವಾದ ತಿಳಿಸಿದ 'ದಿ ವಿಲನ್‌' ನಟಿ ಆ್ಯಮಿ
ನಿನ್ನೆಯಷ್ಟೇ ತೆರೆ ಕಂಡಿರುವ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಜೋಗಿ ಪ್ರೇಮ್‌ ನಿರ್ದೇಶನದ ಚಿತ್ರ 'ದಿ ವಿಲನ್​' ಅಬ್ಬರಿಸುತ್ತಿದ್ದು, ಶಿವಣ್ಣ ಫ್ಯಾನ್ಸ್‌ ನಿರ್ದೇಶಕ ಪ್ರೇಮ್‌ ಮೇಲೆ ಗರಂ ಆಗಿದ್ದರು. ಆದರೆ, ಇದೀಗ ವಿಲನ್‌ ಸಿನಿಮಾದ ನಟಿ ಆ್ಯಮಿ ಜಾಕ್ಸನ್‌ ಸ್ಯಾಂಡಲ್‌ವುಡ್‌ ಬದಲಿಗೆ ಕಾಲಿವುಡ್‌ ಎಂದು ಬಳಸಿ ಪೇಚಿಗೆ ಸಿಲುಕಿದ್ದಾರೆ. ಚಿತ್ರವು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಆ್ಯಮಿ ಜಾಕ್ಸನ್ ಟ್ವೀಟ್‌ ಮಾಡಿದ್ದರು. ಅದರಲ್ಲಿ 'ದಿ ವಿಲನ್' ಚಿತ್ರ ಭರ್ಜರಿ ಆರಂಭ ಪಡೆದಿದ್ದು, ಕಾಲಿವುಡ್‌ನಲ್ಲಿ ನಟಿಸಲು ನನಗೆ ಅವಕಾಶ ನೀಡಿದ ಪ್ರೇಮ್ ಜೀ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದರು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಸ್ಯಾಂಡಲ್‌ವುಡ್‌ ಬದಲಿಗೆ ಕಾಲಿವುಡ್‌ ಎಂದು ಬಳಸಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಕನ್ನಡ ಸಿನಿಮಾದಲ್ಲಿ ನಟಿಸಿದ್ದರೂ ಸ್ಯಾಂಡಲ್‌ವುಡ್‌ ಎನ್ನುವುದು ತಿಳಿದಿರಲಿಲ್ಲವೇ ಎಂದು ಟ್ವೀಟಿಗರು ಪ್ರಶ್ನಿಸಿದ್ದಾರೆ. ತಾನು ಯಾವ ಭಾಷೆಯಲ್ಲಿ ನಟಿಸಿದ್ದೇನೆ.
ಮೊಟ್ಟ ಮೊದಲ ಸಲ ತಿರುಪತಿ ತಿಮ್ಮಪ್ಪನ ದರ್ಶನ ಭಾಗ್ಯ ಪಡೆದ ಆರ್‌ಜಿವಿ
ರಾಮ್ ಗೋಪಾಲ್ ವರ್ಮಾ ಏನಾದರು ಒಂದು ವಿಚಾರದಲ್ಲಿ ಸುದ್ದಿ ಮಾಡುತ್ತಲೇ ಇರುತ್ತಾರೆ. ಸಿನಿಮಾದ ಶೀರ್ಷಿಕೆಯೊಂದನ್ನು ಪ್ರಕಟಿಸಿ ಹೈಪ್ ಕ್ರಿಯೇಟ್ ಮಾಡುವುದು ವರ್ಮಾ ಶೈಲಿ. ಇತ್ತೀಚೆಗೆ 'ಲಕ್ಷ್ಮೀಸ್ ಎನ್‌ಟಿಆರ್' ಎಂಬ ಸಿನಿಮಾ ಆರಂಭಿಸಿದ್ದು ಇದೀಗ ಮತ್ತೆ ಸದ್ದು ಮಾಡಿದ್ದಾರೆ. ಈ ಸಿನಿಮಾ ಆರಂಭಿಸುತ್ತಿರುವ ವರ್ಮಾ, ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ, ಲಕ್ಷ್ಮೀಸ್ ಎನ್‍ಟಿಆರ್ ಸಿನಿಮಾದಲ್ಲಿ ವಾಸ್ತವಗಳನ್ನು ತೋರಿಸುವ ರೀತಿಯಲ್ಲಿ ಆಶೀರ್ವದಿಸು ಎಂದು ದೇವರಲ್ಲಿ ಬೇಡಿಕೊಂಡಿದ್ದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಎನ್‍ಟಿಆರ್ ಅವರ ಪತ್ನಿ ಲಕ್ಷ್ಮಿ ಪಾರ್ವತಿ ಸಹ ಉಪಸ್ಥಿತರಿದ್ದರು.
Bigg Boss Kannada: ಈ ಬಾರಿ ಬಹುತೇಕ ಸಾಮಾನ್ಯ ಜನರ ಬಿಗ್ ಬಾಸ್; ಅರ್ಧದಷ್ಟು ಸೆಮಿ ಸೆಲೆಬ್ರಿಟಿಗಳು
ಬಿಗ್‌ ಬಾಸ್‌ ರಿಯಾಲಿಟಿ ಶೋ ಆರಂಭವಾದ ನಂತರ ವೀಕ್ಷಕರು ಟೆಲಿವಿಷನ್ ನೋಡುವ ರೀತಿಯೇ ಬದಲಾಗಿದೆ. ಆರಂಭದಿಂದಲೂ ಜನಪ್ರಿಯತೆಯಲ್ಲಿ ಎಲ್ಲ ಶೋಗಳಿಗಿಂತಲೂ ಮುಂದಿದೆ. ಬಿಗ್‌ಬಾಸ್ ಕನ್ನಡ ಸೀಸನ್ 5ರಲ್ಲಿ ಮೊಟ್ಟಮೊದಲ ಬಾರಿಗೆ ಜನಸಾಮಾನ್ಯರಿಗೆ ಪ್ರವೇಶ ಸಿಕ್ಕಿತು. ಈ ವರ್ಷವೂ ಜನಸಾಮಾನ್ಯರು ಮತ್ತು ಸೆಲೆಬ್ರಿಟಿಗಳ ಹದವಾದ ಮಿಶ್ರಣ ನೋಡುಗರಿಗೆ ಮುದ ನೀಡಲು ಸಜ್ಜಾಗಿದೆ. ಹೌದು, ಎಲ್ಲ ರಿಯಾಲಿಟಿ ಶೋಗಳ ಬಾಸ್ 'ಬಿಗ್‌ಬಾಸ್' ಆರನೇ ಆವೃತ್ತಿ ಅಕ್ಟೋಬರ್ 21ರ ಸಂಜೆ 6 ಗಂಟೆಗೆ ಕಲರ್ಸ್ ಸೂಪರ್ ಚಾನೆಲ್‌ನಲ್ಲಿ ಆರಂಭವಾಗಲಿದೆ. ಸೋಮವಾರದಿಂದ ಪ್ರತಿ ರಾತ್ರಿ 8 ಗಂಟೆಗೆ ಪ್ರಸಾರವಾಗಲಿರುವ ಈ ಬೃಹತ್ ಶೋಗಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇದು ಬಹುತೇಕ ಸಾಮಾನ್ಯ ಜನರ ಬಿಗ್‌ಬಾಸ್ ಆಗಿರಲಿದೆ. ಹಾಗೆಂದು ಈ ಬಾರಿ ಸೆಲೆಬ್ರಿಟಿಗಳು ಇರುವುದೇ ಇಲ್ಲ ಎಂದೇನಿಲ್ಲ. ಒಟ್ಟು ಹದಿನೆಂಟು ಸ್ಪರ್ಧಿಗಳು ಈ ಬಾರಿ ಮನೆಯಲ್ಲಿ ಇರಲಿದ್ದಾರೆ.
''ಶಿವಣ್ಣ ದಡ್ಡರಲ್ಲ, ದೊಡ್ಡ ಮನುಷ್ಯ'' ಎಂದು ಕಿಚ್ಚ ಸುದೀಪ್​ ಹೇಳಿದ್ದೇಕೆ?
ಸಿನಿಮಾದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಪಾತ್ರ ಇರುತ್ತದೆ. ಆದ್ದರಿಂದ ಅಭಿಮಾನಿಗಳು ಸಿನಿಮಾವನ್ನು ಸಿನಿಮಾವಾಗಿ ನೋಡಲಿ ಎಂದು ನಟ ಕಿಚ್ಚ ಸುದೀಪ್ ಅವರು​ ನಟ ಶಿವರಾಜ್​​ ಕುಮಾರ್​ ಅಭಿಮಾನಿಗಳ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ. ದಾವಣಗೆರೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಿವಣ್ಣ 35 ರಿಂದ 40 ವರ್ಷದಿಂದ ಚಿತ್ರರಂಗದಲ್ಲಿದ್ದಾರೆ. ಸಿನಿಮಾ ಕಥೆ ಕೇಳದೆಯೇ ಅಭಿನಯಿಸಲು ಅವರು ಒಪ್ಪಿಕೊಂಡಿಲ್ಲ ಎಂದು ತಿಳಿಸಿದರು. ಸಿನಿಮಾದಲ್ಲಿ ಸುದೀಪ್, ಶಿವಣ್ಣಗೆ ಹೊಡೆಯುವ ದೃಶ್ಯವನ್ನು ಬೇಕಿದ್ದರೆ ತೆಗೆಯಿಸಲಿ. ಶಿವಣ್ಣ ಪ್ರೇಮ್​ಗೆ ಹೇಳಿ ಕಟ್ ಮಾಡಿಸಲಿ. ಚಿತ್ರದ ಸನ್ನಿವೇಶದಲ್ಲಿ ಯಾರ ಮೇಲೆಯೂ ಕೈ ಮಾಡುವುದಿಲ್ಲ ಎಂದು ಶಿವಣ್ಣ ತಾಯಿಗೆ ಆಣೆ ಮಾಡಿರುತ್ತಾರೆ. ಹಾಗಾಗಿ ಶಿವಣ್ಣ ಕೈ ಎತ್ತುವುದಿಲ್ಲ. ಅಭಿಮಾನಿಗಳು ಸಿನಿಮಾವನ್ನು ಸಿನಿಮಾವಾಗಿ ನೋಡಲಿ ಎಂದು ತಿಳಿ ಹೇಳಿದರು.
ದಿ ವಿಲನ್‌ ಸಿನಿಮಾದಲ್ಲಿ ಶಿವಣ್ಣರದ್ದು ಅಥಿತಿ ಪಾತ್ರವಂತೆ: ಪ್ರೇಮ್‌ ಮೇಲೆ ಗರಂ ಆದ ಫ್ಯಾನ್ಸ್‌
ನಿನ್ನೆಯಷ್ಟೇ ಬೆಳ್ಳಿತೆರೆಗೆ ಅಪ್ಪಳಿಸಿರುವ 'ದಿ ವಿಲನ್​' ಚಿತ್ರ ಮೊದಲ ದಿನವೇ ಗಲ್ಲಾಪಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿತ್ತು. ಹೀಗಿರುವಾಗಲೇ ಇದೀಗ ಸುದೀಪ್‌ ಮತ್ತು ಶಿವರಾಜ್‌ಕುಮಾರ್‌ ಅಭಿಮಾನಿಗಳ ನಡುವೆ ಮುಸುಗಿನ ಗುದ್ದಾಟ ಆರಂಭವಾಗಿದ್ದು, ನಿರ್ದೇಶಕ ಪ್ರೇಮ್‌ ವಿರುದ್ಧ ಕಿಡಿಕಾರಿದ್ದಾರೆ. ರಾಜ್‌ಕುಮಾರ್‌ ಅವರ ಹಿರಿ ಮಗ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ಗೆ ಅನ್ಯಾಯವಾಗಿದೆ ಎಂದು ಜೋಗಿ ಪ್ರೇಮ್ ಮೇಲೆ ಶಿವಣ್ಣನ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿ ವಿಲನ್ ಸಿನಿಮಾದಲ್ಲಿ ಶಿವಣ್ಣನ ಪಾತ್ರ ಡಮ್ಮಿ, ಕೇವಲ ಅತಿಥಿ ಪಾತ್ರವಷ್ಟೇ ಎಂದು ಆರೋಪಿಸಿರುವ ಅಭಿಮಾನಿಗಳು, 3 ಗಂಟೆ ಸಿನಿಮಾದಲ್ಲಿ ಶಿವಣ್ಣ ತೆರೆ ಮೇಲೆ 1.15 ನಿಮಿಷ ಅಬ್ಬರಿಸುತ್ತಾರೆ. ಆದರೆ ಸುದೀಪ್ 1.45 ನಿಮಿಷಗಳ ಕಾಲ ತೆರೆ ಮೇಲಿರುತ್ತಾರೆ. ಇದರಿಂದ ಕುಪಿತಗೊಂಡಿರುವ ಶಿವರಾಜ್‌ಕುಮಾರ್ ಅಭಿಮಾನಿಗಳು ಪ್ರೇಮ್‌ ವಿರುದ್ಧ ಫುಲ್‌ ಗರಂ ಆಗಿದ್ದಾರೆ.
Bigg Boss House: 'ಬಿಗ್ ಬಾಸ್ ಕನ್ನಡ 6' ಹೊಸ ಮನೆಯ ವಿಶೇಷಗಳು
ಅಗ್ನಿ ಅವಘಡದಲ್ಲಿ ಭಸ್ಮವಾಗಿದ್ದ ಬಿಗ್ ಬಾಸ್ ಮನೆ ಇದೇ ಅಕ್ಟೋಬರ್ 21ರಿಂದ ಬಿಗ್ ಬಾಸ್ ಕನ್ನಡ ಹೊಸ ಆವೃತ್ತಿ ಆರಂಭವಾಗುತ್ತಿದೆ. ಅಸಲಿ ಆಟ ಶುರು ಆಗೋಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಸಲ ಮನೆ ಯಾರೆಲ್ಲಾ ಪ್ರವೇಶ ಮಾಡುತ್ತಾರೆ? ಜನ ಸಾಮಾನ್ಯರು ಎಷ್ಟು ಮಂದಿ? ಸೆಮಿ ಸೆಲೆಬ್ರಿಟಿಗಳೇ ಶೇ.50ರಷ್ಟು ಎಂದಿದೆ ವಾಹಿನಿ. ಓ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸಾಮಾನ್ಯರಿಗೆ ಅವಕಾಶ ನೀಡಲಾಗಿದೆ. ಅದೇ ರೀತಿ ಬಿಗ್ ಬಾಸ್ ಮನೆಯ ವಿಶೇಷಗಳು ಏನು ಎಂಬುದನ್ನು ಈಗ ನೋಡೋಣ. ಬಿಡದಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ನಡೆದ ಅಗ್ನಿ ಅನಾಹುತದ ಬಗ್ಗೆ ನಿಮಗೆಲ್ಲ ಗೊತ್ತಿರಬಹುದು. ಆ ಅವಘಡದಲ್ಲಿ ಬಿಗ್‌ಬಾಸ್ ಮನೆಯೂ ಭಸ್ಮವಾಗಿ ಹೋಗಿತ್ತು. ಹಾಗಾಗಿ ಈ ಬಾರಿ ಸಂಪೂರ್ಣವಾಗಿ ಹೊಸದಾಗಿ ಮನೆಯನ್ನು ನಿರ್ಮಿಸಲಾಗಿದೆ.

Want to stay updated ?

x

Download our Android app and stay updated with the latest happenings!!!


90K+ people are using this