facebook pixel
chevron_right Health
transparent
ಲೈಂಗಿಕ ಸಮಸ್ಯೆ ಸಹಿತ ಹಲವಾರು ರೋಗಗಳನ್ನು ನಿಯಂತ್ರಿಸಲು 'ಕಿತ್ತಳೆ ಹಣ್ಣು' ಸೇವಿಸಿ
ಪ್ರಕೃತಿ ಮಾತೆಯು ನಮಗೆ ನೀಡಿರುವಂತಹ ಪ್ರತಿಯೊಂದು ಹಣ್ಣು ಹಾಗೂ ತರಕಾರಿ ನಮ್ಮ ದೇಹದ ಆರೋಗ್ಯಕ್ಕೆ ತುಂಬಾ ಲಾಭಕಾರಿ. ಕೆಲವೊಂದು ಹಣ್ಣುಗಳು ಹಾಗೂ ತರಕಾರಿಗಳಲ್ಲಿ ಹೆಚ್ಚಿನ ಪೋಷಕಾಂಶಗಳು ಹಾಗೂ ಆರೋಗ್ಯ ಲಾಭಗಳು ಇವೆ. ಹೆಚ್ಚಿನವರು ಇಷ್ಟಪಡುವಂತಹ ಕಿತ್ತಳೆ ಹಣ್ಣಿನಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಕಿತ್ತಳೆಯು ಕಣ್ಣುಗಳನ್ನು ರಕ್ಷಿಸುವುದು, ದೃಷ್ಟಿ ಸುಧಾರಿಸುವುದು, ಲೈಂಗಿಕ ಸಾಮರ್ಥ್ಯ ವೃದ್ಧಿಸುವುದು, ಮಲಬದ್ಧತೆ ತಡೆಯುವುದು, ಪ್ರತಿರೋಧಕ ವ್ಯವಸ್ಥೆ ಬಲಪಡಿಸುವುದು, ಮನಸ್ಥಿತಿ ಸುಧಾರಿಸುವುದು, ಹಲ್ಲಿನ ಆರೋಗ್ಯ ಉತ್ತಮಪಡಿಸುವುದು, ರಕ್ತದೊತ್ತಡ ನಿಯಂತ್ರಿಸುವುದು, ಚರ್ಮದ ಕಾಂತಿ ಸುಧಾರಿಸುವುದು, ಕ್ಯಾನ್ಸರ್ ಗಡ್ಡೆಗಳು ಬೆಳೆಯದಂತೆ ತಡೆಯುವುದು, ಆಹಾರ ಜೀರ್ಣಿಸಲು ಮತ್ತು ಹೃದಯವನ್ನು ರಕ್ಷಿಸುವುದು. ಈ ಲೇಖನದಲ್ಲಿ ಕಿತ್ತಳೆಯಿಂದ ಆಗುವ ಇನ್ನಷ್ಟು ಲಾಭಗಳ ಬಗ್ಗೆ ತಿಳಿಯಿರಿ.
ಪುರುಷರ ನಿಯಮಿತ ಯೋಗಾಭ್ಯಾಸದಿಂದ ಗರ್ಭಪಾತ ತಡೆಯಬಹುದು!
ಪುರುಷರು ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ಪುನರಾವರ್ತಿತ ಸ್ವಾಭಾವಿಕ ಗರ್ಭಪಾತ ಪ್ರಮಾಣ ಕಡಿಮೆಯಾಗುತ್ತದೆ. ಏಕೆಂದರೆ ಯೋಗದಿಂದ ವೀರ್ಯಾಣು ಡಿಎನ್​ಎದಲ್ಲಿನ ಗುಣಮಟ್ಟ ವೃದ್ಧಿಯಾಗುತ್ತದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(AIIMS)ಯ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಅಂಗರಚನಾಶಾಸ್ತ್ರ ವಿಭಾಗದ ಪರಿಣಿತರು ಈ ಸಂಶೋಧನೆ ನಡೆಸಿದ್ದು, ಈ ಕುರಿತಾದ ವರದಿ ಆಂಡ್ರೋಲೊಜಿಯ ಎಂಬ ಮೆಡಿಕಲ್ ಜರ್ನಲ್​ನ​ ಅಕ್ಟೋಬರ್​ ಆವೃತ್ತಿ​ ಹಾಗೂ​ ಅಂತಾರಾಷ್ಟ್ರೀಯ ಜರ್ನಲ್ ಆಫ್ ಸೈಂಟಿಫಿಕ್ ರಿಸರ್ಚ್​ನ ಫೆಬ್ರವರಿ ಆವೃತ್ತಿಯಲ್ಲೂ ಪ್ರಕಟವಾಗಿದೆ.​ ಆಗಾಗ ಮರುಕಳಿಸುತ್ತಿದ್ದ ಸ್ವಾಭಾವಿಕ ಗರ್ಭಪಾತ ಹೊಂದುತ್ತಿದ್ದ ದಂಪತಿಗಳಲ್ಲಿ 60 ಪುರುಷರನ್ನು ನಿಯಮಿತವಾಗಿ ಯೋಗಾಭ್ಯಾಸ ಮಾಡಲು ಅಧ್ಯಯನದ ಭಾಗವಾಗಿ ಬಳಸಲಾಯಿತು. ಅಧ್ಯಯನಕ್ಕೆ ಆಯ್ಕೆಯಾದ ಪುರುಷರು ಯೋಗ ಮಾಡಿದ ಇತಿಹಾಸವನ್ನೇ ಹೊಂದಿರಲಿಲ್ಲ.
ಹಸ್ತಮೈಥುನ ಬಗ್ಗೆ ಇರುವ ಕೆಲವು ತಪ್ಪು ನಂಬಿಕೆಗಳು, ಇದನ್ನೆಲ್ಲಾ ನಂಬಲೇಬೇಡಿ!
ಹಸ್ತಮೈಥುನವೆನ್ನುವುದು ಇಂದು ನಿನ್ನೆಯ ಮಾತಲ್ಲ, 18ನೇ ಶತಮಾನದಿಂದಲೂ ಇದರ ಬಗ್ಗೆ ಚರ್ಚೆಯಾಗುತ್ತಲಿತ್ತು. ಆದರೆ ಜನರು ಇದನ್ನು ನೈತಿಕವಾಗಿ ಒಳ್ಳೆಯದಲ್ಲವೆಂದು ಹೇಳಿದರೆ, ಇನ್ನು ಕೆಲವರು ಇದರಿಂದ ಹಲವಾರು ಅಡ್ಡಪರಿಣಾಮಗಳು ಇದೆ ಎಂದು ವಾದಿಸಲು ಆರಂಭಿಸಿದರು. ಆದರೆ ಇದು ಒಂದು ರೀತಿಯಲ್ಲಿ ಯಾವುದೇ ಲೈಂಗಿಕ ರೋಗಗಳನ್ನು ಆಹ್ವಾನಿಸದೆ ಕಾಮನೆಗಳನ್ನು ತಣಿಸುವುದು ಮತ್ತು ದೇಹಕ್ಕೆ ಲೈಂಗಿಕ ತೃಪ್ತಿ ಒದಗಿಸುವುದು. ಇದನ್ನು ಎಲ್ಲಾ ವರ್ಗದ ಜನರು ಮಾಡುವರು. ಇದರ ಬಗ್ಗೆ ಇರುವ ಕೆಲವೊಂದು ತಪ್ಪು ಅಭಿಪ್ರಾಯಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.
ಬಟಾಣಿ ಹಾಲಿನ ಬಗ್ಗೆ ಕೇಳಿದ್ದೀರಾ? ನೀವು ಇದನ್ನು ಉಪಯೋಗಿಸಿದ್ದೀರಾ?
ಹಾಲಿನ ಬೇಡಿಕೆ ಹೆಚ್ಚುತ್ತಿದ್ದಂತೆಯೇ ಇದಕ್ಕೆ ಪರ್ಯಾಯ ಉತ್ಪನ್ನಗಳಿಗೂ ಬೇಡಿಕೆಯುಂಟಾಗಿದೆ. ಈ ನಿಟ್ಟಿನಲ್ಲಿ ನಡೆಸಿದ ಸಂಶೋಧನೆಯ ಪರಿಣಾಮವಾಗಿ ಇಂದು ಮಾರುಕಟ್ಟೆಯಲ್ಲಿ ಸೋಯಾ ಅವರೆಯಿಂದ ತಯಾರಿಸಲ್ಪಟ್ಟ ಹಾಲು 'ನಾನ್ ಡೈರಿ ಪ್ರಾಡಕ್ಟ್' ಎಂಬ ಹೆಸರಿನಲ್ಲಿ, ಅಂದರೆ ಪ್ರಾಣಿಜನ್ಯ ಮೂಲವಲ್ಲದ ಉತ್ಪನ್ನಗಳಿಂದ ತಯಾರಾದ ಉತ್ಪನ್ನಗಳ ರೂಪದಲ್ಲಿ ಲಭಿಸುತ್ತಿವೆ. ಈ ನಿಟ್ಟಿನಲ್ಲಿ ಮುಂದುವರೆದ ಸಂಶೋಧನೆ ಇಂದು ಬಟಾಣಿ ಕಾಳುಗಳಿಂದ ಹಾಲನ್ನು ಪಡೆಯುವತ್ತ ಮುಂದುವರೆದು ಹೆಚ್ಚಿನ ಪ್ರೋಟೀನ್ ಮತ್ತು ಕ್ಯಾಲ್ಸಿಯಂಭರಿತ ಹಾಲನ್ನು ತಯಾರಿಸಲು ಸಾಧ್ಯವಾಗಿದ್ದು ಹಸುವಿನ ಹಾಲಿಗೆ ಸಮರ್ಥ ಪರ್ಯಾಯವೆಂಬ ಭರವಸೆ ನೀಡಿದೆ. ಹೆಸರೇ ಸೂಚಿಸುವಂತೆ, ಈ ಹಾಲನ್ನು ಬಟಾಣಿ ಕಾಳುಗಳಿಂದ ತಯಾರಿಸಲಾಗುತ್ತದೆ. ಕೆಲವರಿಗೆ ಹಸುವಿನ ಹಾಲನ್ನು ಜೀರ್ಣೀಸಿಕೊಳ್ಳಲು ಸಾಧ್ಯವಾಗದೇ ಇರುತ್ತದೆ ಅಥವಾ ಕೆಲವರಿಗೆ ಹಾಲಿನ ರುಚಿ ಅಥವಾ ಪರಿಮಳ ಹಿಡಿಸದೇ ಹೋಗಬಹುದು. ಬಾದಾಮಿ ಹಾಲು ಆರೋಗ್ಯಕರವೇನೋ ಸರಿ, ಆದರೆ ಇದು ತೀರಾ ದುಬಾರಿ.
ಶೌಚದ ಬಳಿಕ ಚೆನ್ನಾಗಿ ತೊಳೆದುಕೊಳ್ಳಿ, ಒರೆಸಿಕೊಳ್ಳಬೇಡಿ!
ದೇಹವನ್ನು ಸ್ವಚ್ಛಗೊಳಿಸಲು ಹಲವಾರು ವಿಧಾನಗಳು ಇವೆ. ಅದರಲ್ಲೂ ಭಾರತೀಯರು ಪ್ರತಿಯೊಂದಕ್ಕೂ ನೀರನ್ನು ಬಳಕೆ ಮಾಡುವರು. ಅದು ಶೌಚಾಲಯವಾಗಿರಲಿ ಅಥವಾ ಸ್ನಾನಗೃಹವೇ ಆಗಿರಲಿ ನೀರು ಬೇಕೇ ಬೇಕು. ಅವರು ಶೌಚಾಲಯಕ್ಕೆ ಹೋದರೂ ಟಾಯ್ಲೆಟ್ ಪೇಪರ್ ನಲ್ಲಿ ಒರೆಸಿಕೊಂಡು ಬರುವರು. ಆದರೆ ಇದು ಭಾರತೀಯರಾಗಿರುವ ನಮಗೆ ಖಂಡಿತವಾಗಿಯೂ ಸಾಧ್ಯವಿಲ್ಲ. ವೈದ್ಯರ ಪ್ರಕಾರ ಒರೆಸಿಕೊಳ್ಳುವುದು ತುಂಬಾ ಅಸಂಬದ್ಧ ವಿಧಾನವೆಂದು ಹೇಳಲಾಗಿದೆ. ಆದರೆ ಯಾವ ವಿಧಾನವು ಉತ್ತಮ ಎನ್ನುವಂತಹ ಪ್ರಶ್ನೆಯು ಮಾತ್ರ ಹಾಗೆ ಉಳಿದುಕೊಳ್ಳುವುದು. ನೀರಿನಿಂದ ತೊಳೆಯುವುದು ಅಥವಾ ಒರೆಸಿಕೊಳ್ಳುವುದು? ಒರೆಸಿಕೊಳ್ಳುವುದರಿಂದ ಹಲವಾರು ರೀತಿಯ ಸೋಂಕುಗಳು ಕಾಣಿಸಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ. ಈ ಲೇಖನದಲ್ಲಿ ನಿಮಗೆ ಈ ಬಗ್ಗೆ ಸರಿಯಾಗಿ ಅರ್ಥ ಮಾಡಿಸಿಕೊಡಲಾಗುವುದು.
ದಾಳಿಂಬೆ ಜೀರಿಗೆಗಳ ಜತೆ ಶುಂಠಿಯೂ ಇರಲಿ
ನಮ್ಮ ದೇಹದಲ್ಲಿ, ನಮ್ಮ ಆರೋಗ್ಯ ರಚನೆಯಲ್ಲಿ ಬ್ಯಾಕ್ಟೀರಿಯಾಗಳ ಪಾತ್ರ ಹಿರಿದು. ಬ್ಯಾಕ್ಟೀರಿಯಾಗಳು ಸರಿಯಾದ ಪ್ರಮಾಣದಲ್ಲಿದ್ದರೆ ಮಾತ್ರ ನಾವು ಸರಿಯಾಗಿರುತ್ತೇವೆ. ಬ್ಯಾಕ್ಟೀರಿಯಾಗಳಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎಂದು ಎರಡು ವಿಧ. ಒಳ್ಳೆಯ ಬ್ಯಾಕ್ಟೀರಿಯಾಗಳು ಸ್ವಸ್ಥ ಆರೋಗ್ಯಕ್ಕೆ ಕಾರಣ. ಕೆಟ್ಟ ಬ್ಯಾಕ್ಟೀರಿಯಾಗಳು ಹೆಚ್ಚಾದಲ್ಲಿ ಅವು ರೋಗಗಳಿಗೆ, ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಮ್ಮ ಇಂದಿನ ತಪ್ಪು ಆಹಾರಪದ್ಧತಿಯಿಂದಾಗಿ ಕೆಟ್ಟ ಬ್ಯಾಕ್ಟೀರಿಯಾಗಳ ಸಂಖ್ಯೆ ಉಲ್ಬಣವಾಗಿ ಆರೋಗ್ಯ ಹದಗೆಡುತ್ತದೆ. ಕರಿದ ಆಹಾರ, ಬೇಕರಿಯ ಆಹಾರ, ಹೆಚ್ಚಿನ ಸಂಸ್ಕರಿತ ಆಹಾರಗಳ ಸೇವನೆಯು ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಮಾಡುತ್ತವೆ. ಕೆಟ್ಟ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚಾಗುತ್ತದೆ. ಹಾಗಾಗಿ ತಪ್ಪು ಆಹಾರವೇ ನಮ್ಮ ಎಲ್ಲ ಸಮಸ್ಯೆಗಳಿಗೆ ಮೂಲ. ಹೇಗೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೋ ಹಾಗೆ ತಪ್ಪು ಆಹಾರದಿಂದ ಉಂಟಾಗಿರುವ ಸಮಸ್ಯೆಯನ್ನು ಸರಿಯಾದ ಆಹಾರದಿಂದ ಸರಿಪಡಿಸಲು ಸಾಧ್ಯ.
ಅಗಣಿತ ಗುಣಗಳ ಗಣಿ!
ಗಿರಿಧರ ಕಜೆ ಒಬ್ಬ ವ್ಯಕ್ತಿಗೆ ಗುಣವೇ ಮುಖ್ಯ. ಇಲ್ಲಿ ಗುಣವೆಂದರೆ ಮಾನವನ ನಡತೆ ಎಂಬರ್ಥ ಎದ್ದು ಕಾಣುತ್ತದೆ. ಜಗತ್ತಿನ ಪ್ರತಿಯೊಂದು ದ್ರವ್ಯಕ್ಕೂ ಅದರದ್ದೇ ಆದ ಗುಣಲಕ್ಷಣಗಳಿರುತ್ತವೆ. ಗುಣವೆಂದರೆ ಆ ದ್ರವ್ಯದ ಧರ್ಮ. ವಸ್ತುಗಳಿಂದ ಬೇರ್ಪಡಿಸಲಾಗದ ಈ ಗುಣಗಳು ಕ್ರಿಯೆ ಹಾಗೂ ವಿಶೇಷಗಳಿಂದ ಬೇರೆಯಾಗಿವೆ. ಜ್ಞಾನೇಂದ್ರಿಯಗಳಿಗೆ ಗೋಚರವಾಗುವ ವಿಷಯಗಳೇ ಗುಣವೆಂದು ಚರಕಸಂಹಿತೆಯಲ್ಲಿ ನಿರ್ಣಯಿಸಲಾಗಿದೆ. ವಿಶ್ವದ ಯಾವುದೇ ದ್ರವ್ಯವನ್ನು ಅರ್ಥೈಸಿಕೊಳ್ಳಬೇಕಾದರೆ ಅದರ ಮೂಲಗುಣಗಳನ್ನು ತಿಳಿದುಕೊಳ್ಳಲೇಬೇಕು. ಆಹಾರವನ್ನು ತಿನ್ನುವ ಮೊದಲು ಅದರ ಗುಣಗಳನ್ನು ಅರಿತಿರಬೇಕು. ಇಲ್ಲದಿದ್ದರೆ ಎರಡು ಮಾವಿನಹಣ್ಣು ತಿಂದಾಗ ಹಸಿವೆ ಯಾಕೆ ಜಾಸ್ತಿಯಾಯಿತು ಎಂದು ಗೊತ್ತಾಗುವುದಿಲ್ಲ. ಶುಂಠಿ ಸೇವಿಸಿದರೆ ಅಜೀರ್ಣ ಹೇಗೆ ಸರಿಯಾಯಿತೆಂದು ಅರ್ಥವಾಗುವುದಿಲ್ಲ. ಅತಿಯಾಗಿ ಕ್ಯಾರೆಟ್ ತಿಂದಾಗ ಹೊಟ್ಟೆಉರಿ ಯಾಕೆ ಉಂಟಾಯಿತೆಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಚಳಿಗಾಲದಲ್ಲಿ ಚರ್ಮ ಏಕೆ ಸುಕ್ಕುಗಟ್ಟುತ್ತದೆ ಎಂಬುದು ತಿಳಿಯುವುದಿಲ್ಲ.
ಕಾಮ ಪ್ರಚೋದಕ ತಾಂತ್ರಿಕ ಮಸಾಜ್‌ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ನೋಡಿ ಇದರ ಪ್ರಯೋಜನಗಳು
ಇಂದಿನ ಆಧುನಿಕ ಜೀವನ ಶೈಲಿ ಹಾಗೂ ಬಿಡುವಿಲ್ಲದ ಕೆಲಸದಿಂದ ಪುರುಷ ಹಾಗೂ ಮಹಿಳೆ ಇಬ್ಬರೂ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒತ್ತಡದ ಜೀವನ ಶೈಲಿಯಿಂದ ಹಲವಾರು ಮಾನಸಿಕ, ದೈಹಿಕ ಹಾಗೂ ಲೈಂಗಿಕ ಸಮಸ್ಯೆಗಳು ಎದುರಾಗುತ್ತಿವೆ. ಜೀವನವನ್ನು ಅದರ ಸಂಪೂರ್ಣತೆಯಲ್ಲಿ ಅನುಭವಿಸಬೇಕಾದರೆ ಮತ್ತು ದಿನನಿತ್ಯದ ಕೆಲಸದಲ್ಲಿ ಚೈತನ್ಯದಾಯಕವಾಗಿರಬೇಕಾದರೆ ದೇಹ ಹಾಗೂ ಮನಸ್ಸಿಗೆ ಉಪಶಮನ ನೀಡಬೇಕಾಗುತ್ತದೆ. ಬಾಡಿ ಮಸಾಜ್ ಎಂಬುದು ಮನಸ್ಸು ಹಾಗೂ ದೇಹಗಳನ್ನು ತಣಿಸಿ ಉಲ್ಲಾಸ ಹಾಗೂ ನೆಮ್ಮದಿಗಳು ಮರುಕಳಿಸುವಂತೆ ಮಾಡುವ ಅದ್ಭುತ ಕ್ರಿಯೆಯಾಗಿದೆ. ಮಸಾಜ್ ನಿಮಗೆ ವಿಶ್ರಾಂತಿ ನೀಡಿ ಮತ್ತೆ ಸಾಮರ್ಥ್ಯ ವೃದ್ಧಿಸುವಂತೆ ಮಾಡುತ್ತದೆ. ಜೊತೆಗೆ ನಿಮ್ಮೊಂದಿಗೆ ನೀವು ಒಂದಿಷ್ಟು ಸಮಯ ಕಳೆಯಲು ಸಹಕಾರಿಯಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ಮಸಾಜ್ ವಿಧಾನ ಬಹು ಜನಪ್ರಿಯತೆ ಪಡೆದುಕೊಳ್ಳುತ್ತಿದೆ.
ಮೊಳಕೆ ಕಟ್ಟಿದ ಹೆಸರು ಕಾಳಿನ ಆರೋಗ್ಯಕಾರಿ ಪ್ರಯೋಜನಗಳು
ಮೊಳಕೆ ಭರಿಸಿರುವ ಕಾಳುಗಳು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವ ವಿಚಾರ ಪ್ರತಿಯೊಬ್ಬರಿಗೂ ತಿಳಿದಿರುವುದೇ ಆಗಿದ್ದರೂ ಇದರಲ್ಲಿ ಯಾವ ಧಾನ್ಯಗಳನ್ನು ಮೊಳಕೆ ಭರಿಸಿದರೆ ಅದರಿಂದ ದೇಹಕ್ಕೆ ಹೆಚ್ಚು ಲಾಭವಾಗಲಿದೆ ಎಂದು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಹೆಸರುಬೇಳೆಯನ್ನು ಮೊಳಕೆ ಭರಿಸಿ ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಿ. ಇದರಲ್ಲಿ ಕ್ಯಾಲರಿ ಕಡಿಮೆ ಇದ್ದು, ನಾರಿನಾಂಶ ಮತ್ತು ವಿಟಮಿನ್ ಬಿ ಇದೆ. ಇಷ್ಟು ಮಾತ್ರವಲ್ಲದೆ ವಿಟಮಿನ್ ಸಿ ಹಾಗೂ ಕೆ ಇದೆ. ಆಹಾರ ಕ್ರಮದಲ್ಲಿ ಅಳವಡಿಸಬಹುದಾದ ಅದ್ಭುತ ಆಹಾರ ಇದಾಗಿದೆ. ಪ್ರತೀ ಕಪ್ ಮೊಳಕೆ ಭರಿಸಿರುವ ಹೆಸರುಬೇಳೆಯಲ್ಲಿ 31 ಕ್ಯಾಲರಿ ಇದೆ. ಇದು ತೂಕ ಕಳೆದುಕೊಳ್ಳಲು ಸಹಕಾರಿ. ಇದು ಅಗ್ಗ ಹಾಗೂ ಸುಲಭವಾಗಿ ಲಭ್ಯವಿರುವುದು.
ಮಧುಮೇಹ ನಿವಾರಕ ಕೆಂಪುಮೆಣಸು
ಮೆಣಸು ಎಂದಕೂಡಲೇ ದೂರ ಸರಿದು ನಿಲ್ಲುವವರು ಹಲವರಿದ್ದಾರೆ. ಇನ್ನು ಕೆಲವರು ಮೆಣಸಿನ ಪದಾರ್ಥಗಳನ್ನು ಇಷ್ಟಪಟ್ಟು ಸೇವಿಸುತ್ತಾರೆ. ಭಾರತೀಯ ಅಡುಗೆಮನೆಯ ಸಾಮಾನ್ಯ ಪದಾರ್ಥ ಮೆಣಸು. ಕೆಂಪುಮೆಣಸನ್ನು ಸಾಂಬಾರ ಮಾಡಲು, ಇನ್ನಿತರೆ ಪದಾರ್ಥ ಮಾಡಲು ಬಳಸುತ್ತೇವೆ. ಇದರ ಪುಡಿ ಮಾಡಿಟ್ಟುಕೊಂಡು ಇನ್ನುಳಿದ ಕೆಲವೊಂದು ಪದಾರ್ಥಗಳಲ್ಲಿಯೂ ಬಳಕೆ ಮಾಡುತ್ತೇವೆ. ಆದರೆ ಇದರ ಬಳಕೆ ಮಾತ್ರವಲ್ಲ. ಮೆಣಸಿನಕಾಯಿಯ ಪೇಸ್ಟ್, ಉಪ್ಪು, ಅರಿಶಿಣವನ್ನು ಸೇರಿಸಿ ಉಪ್ಪಿನಕಾಯಿ ತಯಾರಿಸಲಾಗುತ್ತದೆ. ಊಟದೊಂದಿಗೆ ಇದನ್ನು ಔಷಧಿಯಂತೆ ಮಿತಪ್ರಮಾಣದಲ್ಲಿ ಸೇವಿಸಿದರೆ ಅದು ಜೀರ್ಣಕಾರಿಯಂತೆ ಕೆಲಸ ಮಾಡುತ್ತದೆ. ಪಲ್ಯದಂತೆ ಸೇವಿಸುವುದಲ್ಲ! ಭೇದಿಯಿಂದ ಬಳಲುತ್ತಿದ್ದರೆ, ಮೆಣಸು, ಕರ್ಪರ, ಜೀರಿಗೆ, ಇಂಗು ಸೇರಿಸಿ ತಯಾರಿಸಿದ ಮಾತ್ರೆಗಳು ಸಮಸ್ಯೆಯ ನಿರ್ವಹಣೆಗೆ ಅನುಕೂಲಕಾರಿ. ಹರಳೆಣ್ಣೆ ಹಾಗೂ ಕೆಂಪುಮೆಣಸನ್ನು ಜಜ್ಜಿ ಔಷಧ ತಯಾರಿಸಿ ನೋವಿರುವ ಭಾಗದಲ್ಲಿ ಹಚ್ಚುವುದರಿಂದ ಊತ, ನೋವು ಕಡಿಮೆಯಾಗುತ್ತದೆ.
ಟ್ಯೂಬರಸ್ ಸ್ಕ್ಲೆರೋಸಿಸ್ ರೋಗದ ಲಕ್ಷಣಗಳು ಹಾಗೂ ಚಿಕಿತ್ಸಾ ವಿಧಾನಗಳು
ಅಪರೂಪದ ಅನುವಂಶೀಯ ಸಮಸ್ಯೆಗಳ ಕಾರಣದಿಂದ ದೇಹದ ತುಂಬೆಲ್ಲ ಮೃದುವಾದ ಗಂಟುಗಳು ಕಾಣಿಸಿಕೊಳ್ಳುವ ರೋಗವನ್ನು ಟ್ಯೂಬರಸ್ ಸ್ಕ್ಲೆರೋಸಿಸ್ ಎಂದು ಕರೆಯಲಾಗುತ್ತದೆ. ಇವು ಅಸಹಜವಾಗಿ ಹೆಚ್ಚುವರಿಯಾಗಿ ಬೆಳೆದ ಕ್ಯಾನ್ಸರಕಾರಕವಲ್ಲದ ಸಾಮಾನ್ಯ ಜೀವಕೋಶಗಳಾಗಿವೆ. ಚಿಕ್ಕ ವಯಸ್ಸಿನಲ್ಲಿಯೇ ಈ ರೋಗವನ್ನು ಪತ್ತೆ ಹಚ್ಚಲು ಸಾಧ್ಯವಿದೆ. ಆದರೆ ಸಣ್ಣ ವಯಸ್ಸಿನಲ್ಲಿ ಈ ರೋಗದ ಲಕ್ಷಣಗಳು ತೀರಾ ಸೌಮ್ಯವಾಗಿರುವುದರಿಂದ, ಬಹುತೇಕ ಬಾರಿ ಪ್ರೌಢಾವಸ್ಥೆಗೆ ಬರುವವರೆಗೆ ಈ ರೋಗವು ಪತ್ತೆ ಆಗುವುದಿಲ್ಲ. ಗಂಭೀರ ಸ್ವರೂಪದ ಟ್ಯೂಬರಸ್ ಸ್ಕ್ಲೆರೋಸಿಸ್‌ನಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ಕೆಲ ಸ್ವರೂಪದ ಅಂಗ ಊನತೆಯು ಉಂಟಾಗಬಹುದು. ಈ ರೋಗ ನಿವಾರಣೆಗೆ ಈವರೆಗೂ ಸೂಕ್ತ ಔಷಧಿ ಕಂಡು ಹಿಡಿಯಲು ಸಾಧ್ಯವಾಗಿಲ್ಲವಾದರೂ, ರೋಗದಿಂದುಂಟಾಗುವ ಪ್ರತಿಕೂಲ ಪರಿಣಾಮಗಳನ್ನು ಸಾಕಷ್ಟು ಮಟ್ಟದಲ್ಲಿ ಕಡಿಮೆ ಮಾಡಬಲ್ಲ ಔಷಧಿಗಳು ಲಭ್ಯವಿವೆ.
ಅನಾನಸ್ ಹಾಗೂ ಶುಂಠಿಯಲ್ಲಿ ಅಡಗಿದೆ ನೋವು ನಿವಾರಕ ಶಕ್ತಿ
ಎಲ್ಲರಿಗೂ ಇಷ್ಟವಾಗುವ, ನೋಡಲು ಚೆಂದವಾದ ಬಣ್ಣವನ್ನು ಹೊಂದಿರುವ ಹಣ್ಣು ಅನಾನಸ್. ಹಿಂದಿನ ಅಂಕಣವೊಂದರಲ್ಲಿ ನಾವು ಅನಾನಸ್​ನ ಔಷಧೀಯ ಗುಣಗಳನ್ನು ತಿಳಿದುಕೊಂಡಿದ್ದೆವು. ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿ ಶುಂಠಿಯು ವಿಶೇಷ ಸ್ಥಾನವನ್ನೇ ಅಲಂಕರಿಸುತ್ತದೆ. ನೋವು ನಿವಾರಕ ಎಂದೇ ಪ್ರಚಲಿತವಾಗಿದೆ ಸಹ. ಅನಾನಸ್​ನಲ್ಲಿ ಬ್ರೊಮಿಲಿನ್ ಎಂಬ ಅಂಶವಿದೆ. ಇದು ಶುಂಠಿಯ ಜೊತೆ ಸೇರಿ ಪರಿಣಾಮಕಾರಿ ನೋವು ನಿವಾರಕವಾಗಿ ಕೆಲಸ ಮಾಡಬಲ್ಲುದು. ಅನಾನಸ್, ಶುಂಠಿ, ಸೌತೆಕಾಯಿ, ಸೇಬು, ಲಿಂಬೆರಸ ಹಾಗೂ ಅರಿಶಿಣವನ್ನು ಒಟ್ಟಾಗಿ ಉಪಯೋಗಿಸಿ ಮಾಡುವ ಒಂದು ಪರಿಣಾಮಕಾರಿ ಮನೆಮದ್ದು, ಜ್ಯೂಸ್ ಬಗ್ಗೆ ತಿಳಿದುಕೊಳ್ಳೋಣ. ಅನಾನಸ್ ಕತ್ತರಿಸಿಕೊಂಡು ಅದಕ್ಕೆ ಹೆಚ್ಚಿದ ಸೇಬು, ಸೌತೆಕಾಯಿ ಹಾಕಬೇಕು. ಜೊತೆಯಲ್ಲಿ ಹಸಿಶುಂಠಿ, ಲಿಂಬೆರಸ, ಎರಡು ಚಿಟಿಕೆ ಅರಿಶಿಣ ಸೇರಿಸಿ ಮಿಕ್ಸಿಗೆ ಹಾಕಿ ಜ್ಯೂಸ್ ತಯಾರಿಸಿಕೊಳ್ಳಬೇಕು. ಇದನ್ನು ದಿನಕ್ಕೆ ಎರಡು ಬಾರಿ ಕುಡಿಯುತ್ತ ಬಂದಲ್ಲಿ ನೋವನ್ನು ಕಡಿಮೆ ಮಾಡಲು ಸಹಕಾರಿ.
ವಿಶ್ವ ಆಹಾರ ದಿನ 2018: ಮನೆಯಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯಲು ಸರಳ ಟಿಪ್ಸ್
ಇಂದಿನ ದಿನಗಳಲ್ಲಿ ಪ್ರತಿಯೊಂದಕ್ಕೂ ಒಂದೊಂದು ದಿನವನ್ನಾಗಿ ಆಚರಿಸಲಾಗುತ್ತದೆ. ಬಳಸುವ ವಸ್ತುಗಳಿಂದ ಹಿಡಿದು ದೇಹವನ್ನು ವಕ್ಕರಿಸಿರುವಂತಹ ರೋಗಗಳ ತನಕ. ಹಾಗೆ ನಾವು ತಿನ್ನುವಂತಹ ಆಹಾರಕ್ಕೂ ಒಂದು ದಿನವಿದೆ. ವಿಶ್ವ ಆಹಾರ ದಿನ 2018ನ್ನು ಆಚರಿಸಲಾಗುತ್ತಿದೆ. ವಿಶ್ವದಲ್ಲಿ ವ್ಯರ್ಥವಾಗುವ ಆಹಾರ ತಡೆಗಟ್ಟಲು ಈ ದಿನವನ್ನು ಆಚರಿಸಲಾಗುತ್ತಿದೆ. ಅ.16ರಂದು ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತಿದೆ. ಮನೆಯಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯಲು ಇಲ್ಲಿ ಐದು ಸರಳ ವಿಧಾನಗಳನ್ನು ನೀಡಲಾಗಿದೆ. ಇದು ಯಾವುದೆಂದು ನೀವು ಈ ಲೇಖನದ ಮೂಲಕ ತಿಳಿಯಿರಿ.
ಹಶಿಮೋಟೊ ಥೈರಾಯ್ಡಿಟಿಸ್​ನಿಂದ ಮುಕ್ತಿ ಹೇಗೆ?
ವೆಂಕಟ್ರಮಣ ಹೆಗಡೆ ಹಶಿಮೋಟೊ ಥೈರಾಯ್ಡಿಟಿಸ್ ಒಂದು ಆಟೋಇಮ್ಯೂನ್ ಕಾಯಿಲೆ. ಇಲ್ಲಿ ನಮ್ಮ ಇಮ್ಯೂನ್ ವ್ಯವಸ್ಥೆಯು (ಪ್ರತಿರಕ್ಷಣಾ ವ್ಯವಸ್ಥೆಯು) ಥೈರಾಯ್ಡ್ ಮೇಲೆ ದಾಳಿ ಮಾಡಿರುತ್ತದೆ. ಥೈರಾಯ್ಡ್​ ಗ್ಲಾಂಡ್ ಕುತ್ತಿಗೆಯ ಮಧ್ಯಭಾಗ ಗಂಟಲಿನ ಕೆಳಭಾಗದಲ್ಲಿರುವ ಗ್ರಂಥಿ. ಇದು ಅಂತಃಸ್ರಾವಕ (ಎಂಡೋಕ್ರೈನ್) ವ್ಯವಸ್ಥೆಯ ಮುಖ್ಯ ಭಾಗ. ದೇಹದ ಅನೇಕ ಕಾರ್ಯಗಳಿಗೆ ಬೇಕಾದ ಹಾಮೋನ್ ಸ್ರವಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಹಷಿಮೊಟೋ ಥೈರಾಯ್ಡಿಟಿಸ್ ಹೆಚ್ಚಾಗಿ 40 ವರ್ಷ ದಾಟಿದ ಮಹಿಳೆಯರಲ್ಲಿ ಕಂಡುಬರುತ್ತದೆ. ಇತ್ತೀಚೆಗೆ ಪುರುಷರಲ್ಲಿ ಮತ್ತು ಮಕ್ಕಳಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಹಶಿಮೋಟೊ ಥೈರಾಯ್ಡಿಟಿಸ್ ನಿಧಾನವಾಗಿ ತನ್ನ ಗುರುತುಗಳನ್ನು ತೋರಿಸುತ್ತದೆ. ಮೊದಮೊದಲು ಗಂಟಲಿನ ಭಾಗಗಳಲ್ಲಿ ಬಾವು ಕಂಡುಬರುವುದು. ವರ್ಷಗಳು ಕಳೆದಂತೆ ಕ್ರೋನಿಕ್ ಥೈರಾಯ್ಡ್ ಸಮಸ್ಯೆಗೆ ಕಾರಣವಾಗುತ್ತದೆ. ರಕ್ತದಲ್ಲಿ ಹಾಮೋನ್​ಗಳ ಸ್ರವಿಕೆ ಕಡಿಮೆಯಾಗುತ್ತದೆ.
ಸೆಕ್ಸ್ ವೇಳೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ನೋಡಿ..
ಸೆಕ್ಸ್ ವೇಳೆ ಯಾವ ರೀತಿಯ ಭಾವನೆಯಾಗುವುದು ಎನ್ನುವುದು ಇದನ್ನು ಅನುಭವಿಸಿದ ಪ್ರತಿಯೊಬ್ಬರಿಗೂ ತಿಳಿದಿರುವಂತಹ ವಿಚಾರ. ಅದನ್ನು ಮತ್ತೆ ಮತ್ತೆ ಹೇಳಬೇಕಾಗಿಲ್ಲ. ಇದು ಅವರವರ ಭಾವಕ್ಕೆ ಬಿಟ್ಟದ್ದು. ಆದರೆ ನಿಮ್ಮ ದೇಹಕ್ಕೆ ಮಾನಸಿಕವಾಗಿ ಯಾವ ರೀತಿಯ ಪರಿಣಾಮವಾಗುತ್ತದೆ ಎಂದು ನಿಮಗೆ ತಿಳಿದಿದೆಯಾ? ದೇಹವು ಯಾವೆಲ್ಲಾ ಬದಲಾವಣೆಗೆ ಒಳಗಾಗುವುದು ಮತ್ತು ಹೇಗೆ? ಇದರ ಬಗ್ಗೆ ಸೆಕ್ಸ್ ತಜ್ಞರಾಗಿರುವಂತಹ ಮಾಸ್ಟರ್ಸ್ ಮತ್ತು ಜಾನ್ಸನ್ ಅವರು ಕೆಲವು ಮಾಹಿತಿ ಹೊರಹಾಕಿದ್ದಾರೆ. ಇವರು ಸೆಕ್ಸ್ ನ ಆವರ್ತನವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದಾರೆ. ಇದರಲ್ಲಿ ಪ್ರಮುಖವಾಗಿ ಉತ್ಸಾಹ, ಪ್ರಸ್ಥಭೂಮಿ, ಪರಾಕಾಷ್ಠೆ ಮತ್ತು ನಿರ್ಣಯ. ಈ ಲೇಖನದಲ್ಲಿ ಈ ನಾಲ್ಕು ವಿಭಾಗಗಳ ಬಗ್ಗೆ ನಿಮಗೆ ವಿವರವಾಗಿ ಹೇಳಲಿದ್ದೇವೆ.
ದೊಡ್ಡ ಕರುಳಿನ ಹಾಗೂ ಗುದನಾಳದ ಅನುವಂಶೀಯ ಕ್ಯಾನ್ಸರ್ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿಗಳಿವು
ಓರ್ವ ವ್ಯಕ್ತಿಯ ಕುಟುಂಬವು ಕೊಲೊರೆಕ್ಟಲ್ (ಗುದನಾಳದ) ಕ್ಯಾನ್ಸರ್‌ನ ಇತಿಹಾಸ ಹೊಂದಿದ್ದರೆ, ಅಂಥ ಕುಟುಂಬದ ಇತರ ಸದಸ್ಯರಿಗೂ ಈ ರೋಗ ಬಾಧಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಗುದನಾಳ ಕ್ಯಾನ್ಸರ್‌ಗೆ ಕಾರಣವಾಗುವ ರೂಪಾಂತರಗೊಂಡ ಜೀನ್‌ಗಳು ಕುಟುಂಬದ ಇತರ ಸದಸ್ಯರಿಗೂ ವರ್ಗಾವಣೆಯಾಗುವ ಸಾಧ್ಯತೆಗಳಿವೆ ಎಂದು ವೈದ್ಯಕೀಯ ಅಧ್ಯಯನಗಳು ದೃಢಪಡಿಸಿವೆ. ಜೀನ್ ಎಂಬುದು ಡಿಎನ್‌ಎ ಯ ಒಂದು ಭಾಗವಾಗಿದೆ. ನಮ್ಮ ದೇಹದ ಸುಗಮ ಕಾರ್ಯಾಚರಣೆಗೆ ಬೇಕಾದ ಪ್ರೋಟೀನ್‌ಗಳನ್ನು ಉತ್ಪಾದಿಸುವ ಜೆನೆಟಿಕ್ ಕೋಡ್‌ಗಳನ್ನು ಈ ಡಿಎನ್‌ಎಗಳು ಹೊಂದಿರುತ್ತವೆ. ನಾನ್‌ಪಾಲಿಪೋಸಿಸ್ ಕೊಲೊರೆಕ್ಟಲ್ ಕ್ಯಾನ್ಸರ್ ಹಾಗೂ ಫ್ಯಾಮಿಲಿಯಲ್ ಅಡೆನೊಮ್ಯಾಟಸ್ ಪಾಲಿಪೋಸಿಸ್ (ಎಫ್‌ಎಪಿ) ಇವು ಅನುವಂಶಿಕವಾಗಿ ಬರುವ ಗುದನಾಳದ ಎರಡು ಬಗೆಯ ಸಾಮಾನ್ಯ ಕ್ಯಾನ್ಸರ್‌ಗಳಾಗಿವೆ. ಇಂಥ ಜೀನ್‌ಗಳನ್ನು ಹೊಂದಿರುವ ವ್ಯಕ್ತಿಗಳ ಮಕ್ಕಳಿಗೆ ಈ ಕ್ಯಾನ್ಸರ್ ರೋಗ ಬರುವ ಸಾಧ್ಯತೆ ಶೇ.೫೦ ರಷ್ಟಿದೆ.
ಗಿಡಮೂಲಿಕೆ ಥೈಮ್​ನಲ್ಲಿದೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಸಾಮರ್ಥ್ಯ
ಥೈಮ್ ಎನ್ನುವುದೊಂದು ಮೆಡಿಟರೇನಿರನ್ ಗಿಡಮೂಲಿಕೆ. ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು, ಹಲವಾರು ತೊಂದರೆಗಳ ನಿರ್ವಹಣೆಯಲ್ಲಿ ಸಹಾಯಕಾರಿ. ಹೂವು, ಎಲೆಗಳು, ಎಣ್ಣೆಗಳ ರೂಪದಲ್ಲಿ ಥೈಮ್ ಬಳಕೆಯಾಗುತ್ತದೆ. ಥೈಮ್ ಆಂಟಿ ಬ್ಯಾಕ್ಟೀರಿಯಲ್, ಕೀಟನಾಶಕ ಹಾಗೂ ಆಂಟಿ ಫಂಗಲ್ ಗುಣಗಳನ್ನು ಹೊಂದಿದೆ. ವಿದೇಶಿ ವಿ.ವಿ.ಯೊಂದು ಇಲಿಗಳ ಮೇಲೆ ಮಾಡಿದ ಅಧ್ಯಯನದಿಂದ ಥೈಮ್ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿರುವುದನ್ನು ಸಾಬೀತುಪಡಿಸಿದೆ. ಹೈಪರ್ ಟೆನ್ಶನ್​ನ್ನೂ ಕಡಿಮೆ ಮಾಡುವಲ್ಲಿ ಸಹಕಾರಿ. ಕೊಲೊನ್ ಕ್ಯಾನ್ಸರ್, ಬ್ರೆಸ್ಟ್ ಕ್ಯಾನ್ಸರ್ ಬರದಂತೆ ಕಾಯುವಲ್ಲಿ ಥೈಮ್ ಪರಿಣಾಮಕಾರಿ. ಅನೇಕ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳ ನಿರ್ವಹಣೆಗೂ ಅನುಕೂಲಕಾರಿ. ಮೊಡವೆಯನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ನೈಸರ್ಗಿಕವಾಗಿ ಕಫವನ್ನು ಕಡಿಮೆ ಮಾಡುವ ಗುಣ ಇದಕ್ಕಿದೆ. ಥೈಮ್ ಎಲೆಗಳನ್ನು ತಂದು ಕಷಾಯ ಮಾಡಿ ಅಥವಾ ಚಹಾದ ರೀತಿ ಡಿಕಾಕ್ಷನ್ ತೆಗೆದು ಕುಡಿಯಬೇಕು. ಇದರಿಂದ ಕಫ ಕರಗಲು ಸಾಧ್ಯ.
ನಿಮ್ಮ ಆರೋಗ್ಯದ ಬಗ್ಗೆ ವೀರ್ಯ ಬಣ್ಣವು ಏನು ಹೇಳುತ್ತದೆ?
ವೀರ್ಯದ ಬಣ್ಣ ಯಾವ ರೀತಿಯಾಗಿದೆ ಎಂಬುದರ ಮೇಲೆ ವೀರ್ಯದ ಆರೋಗ್ಯವನ್ನು ತಿಳಿಯಬಹುದು ಎಂಬ ವಿಷಯ ನಿಮಗೆ ಗೊತ್ತೆ? ವೈದ್ಯರು ಹೇಳುವ ಪ್ರಕಾರ ನಿಮ್ಮ ವೀರ್ಯದ ಬಣ್ಣವು ನಿಮ್ಮ ಆರೋಗ್ಯದ ಬಗ್ಗೆ ನಿಮಗೇ ತಿಳಿಯಲಾರದ ಹಲವಾರು ಸಂಗತಿಗಳನ್ನು ಬಿಚ್ಚಿಡುತ್ತದೆ. ಅನೇಕ ಬಾರಿ ಸ್ಖಲನದ ನಂತರ ಯಾಕೋ ಇದು ವೀರ್‍ಯದ ರೀತಿ ಕಾಣುತ್ತಿಲ್ಲವಲ್ಲ ಎಂದು ನೀವು ಗಾಬರಿಯಾಗಿರಲೂಬಹುದು. ವೀರ್ಯದ ಬಣ್ಣ ಬದಲಾದಾಗ ಹೀಗೆ ಅನ್ನಿಸುವುದು ಸಹಜವಾಗಿದೆ. ವೀರ್ಯದ ಬಣ್ಣವನ್ನು ಪರೀಕ್ಷಿಸಿ ನಿಮ್ಮ ಸಂಪೂರ್ಣ ಆರೋಗ್ಯದ ಬಗ್ಗೆ ತಿಳಿದುಕೊಳ್ಳಬಹುದು ಎಂಬುದು ಸಾಬೀತಾಗಿದೆ. ಸಾಮಾನ್ಯವಾಗಿ ಆರೋಗ್ಯವಂತ ವೀರ್‍ಯವು ಮೋಡ ಬಿಳಿ ಬಣ್ಣದ್ದಾಗಿರುತ್ತದೆ. ಆದರೆ ಹಲವಾರು ಕಾರಣಗಳಿಂದ ನಿಮ್ಮ ವೀರ್ಯದ ಬಣ್ಣ ಬದಲಾಗಿರುವ ಸಾಧ್ಯತೆಗಳಿವೆ. ವೀರ್‍ಯದ ಬಣ್ಣವು ನಿಮ್ಮ ಆರೋಗ್ಯದ ಬಗ್ಗೆ ಯಾವೆಲ್ಲ ಅಂಶಗಳನ್ನು ತಿಳಿಸುತ್ತದೆ ಎಂಬುದನ್ನು ಅರಿಯಲು ಈ ಲೇಖನ ಓದಿ.
ಮೊದಲ ರಾತ್ರಿ ನವ-ದಂಪತಿಗಳಿಗೆ ಹಾಲು ನೀಡುತ್ತಾರಲ್ಲ! ಯಾಕೆ ಗೊತ್ತೇ?
ಹಿಂದಿನ ಅಂದರೆ 90ರ ದಶಕದ ಮೊದಲ ಸಿನಿಮಾಗಳನ್ನು ನೋಡಿದರೆ ಆಗ ನಿಮಗೆ ಮದುವೆಯಾದ ಮೊದಲ ರಾತ್ರಿಗೆ ಹೂವಿನಿಂದ ಅಲಂಕಾರಗೊಂಡಿರುವ ಮಂಚದ ಮೇಲೆ ಮಲಗಿರುವಂತಹ ಮದುಮಗನಿಗೆ ಮದುಮಗಳು ಲೋಟದಲ್ಲಿ ಹಾಲನ್ನು ಹಿಡಿದುಕೊಂಡು ಬರುವುದನ್ನು ತೋರಿಸಲಾಗುತ್ತಿತ್ತು. ಇಂದಿನ ಸಿನಿಮಾಗಳಲ್ಲಿ ಇದೆಲ್ಲವೂ ಮಾಯವಾಗಿಬಿಟ್ಟಿದೆ! ಅದೆಲ್ಲವನ್ನು ಬಿಡಿ, ನಾವಿಲ್ಲಿ ಸಿನಿಮಾದ ಬಗ್ಗೆ ಚರ್ಚೆ ಮಾಡಲು ಹೊರಟಿರುವುದಲ್ಲ. ಇಲ್ಲಿ ಭಾರತೀಯ ಸಂಪ್ರದಾಯದಂತೆ ಮೊದಲ ರಾತ್ರಿಯ ದಿನ ಮದುಮಗನಿಗೆ ಮದುಮಗಳು ಹಾಲು ತಂದುಕೊಡುವಳು. ನಮ್ಮಲ್ಲಿರುವ ಕೆಲವೊಂದು ಸಂಪ್ರದಾಯಗಳಿಗೆ ಯಾವುದೇ ರೀತಿಯ ಕಾರಣಗಳು ಇರುವುದಿಲ್ಲ. ಆದರೆ ಮೊದಲ ರಾತ್ರಿ ಹಾಲು ನೀಡುವುದಕ್ಕೆ ತನ್ನದೇ ಆಗಿರುವ ಕಾರಣಗಳು ಇವೆ. ಈ ಜನಪ್ರಿಯ ಸಂಪ್ರದಾಯದ ಹಿಂದೆ ವೈಜ್ಞಾನಿಕ ಕಾರಣಗಳು ಇವೆ. ಈ ಕಾರಣಗಳು ಏನು ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.
ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆ, ಆರೋಗ್ಯಕ್ಕೆ ಬಹಳ ಒಳ್ಳೆಯದು
ದೇಹವು ತುಂಬಾ ಆಯಾಸಗೊಂಡಾಗ ಬೇಕಾಗುವಂತಹ ಆರಾಮ ಸಿಗುವುದು ನಿದ್ರೆಯಿಂದ. ದಿನವಿಡಿ ದಣಿದ ದೇಹಕ್ಕೆ ನಿದ್ರೆಯಿಂದ ಸಂಪೂರ್ಣ ವಿಶ್ರಾಂತಿ ಸಿಗುವುದು ಹಾಗೂ ಮರುದಿನಕ್ಕೆ ಮತ್ತೆ ದೇಹವು ಸಜ್ಜುಗೊಳ್ಳುವುದು. ಹೀಗೆ ಭೂಮಿ ಮೇಲಿನ ಪ್ರತಿಯೊಂದು ಜೀವಿ ಕೂಡ ನಿದ್ರೆ ಮಾಡುವುದು. ಅದರಲ್ಲೂ ಮನುಷ್ಯ 7-8 ಗಂಟೆಗಳ ಕಾಲ ನಿದ್ರಿಸುವನು. ನಿದ್ರೆ ನಮ್ಮ ದೇಹಕ್ಕೆ ಅತೀ ಅಗತ್ಯ. ಕೆಲವು 5-6 ಗಂಟೆಗಳ ಕಾಲ ಮಾತ್ರ ನಿದ್ರಿಸುವರು. ಇನ್ನು ಕೆಲವರು 6-7 ಗಂಟೆ ಹೀಗೆ ಇದು ಒಬ್ಬೊರಿಂದ ಒಬ್ಬರಿಗೆ ವ್ಯತ್ಯಾಸವಾಗುತ್ತಾ ಹೋಗುವುದು. 6 ಗಂಟೆಗಳ ನಿದ್ರೆ ದೇಹಕ್ಕೆ ಸಾಕು ಎಂದು ಕೆಲವರು ಭಾವಿಸಿದ್ದಾರೆ. ಆದರೆ ಸ್ಯಾನ್ ಫ್ರಾನ್ಸಿಸ್ಕೋ, ಕ್ಯಾಲಿಫೋರ್ನಿಯಾದ ಯೂನಿವರ್ಸಿಟಿಯವರು ನಡೆಸಿರುವ ಅಧ್ಯಯನದ ಪ್ರಕಾರ ಕೇವಲ ಆರು ಗಂಟೆಗಳ ಕಾಲ ಮಾತ್ರ ನಿದ್ರಿಸುವುದು ತುಂಬಾ ಕೆಟ್ಟ ವಿಚಾರ. ಇದು ದೀರ್ಘಕಾಲದ ನಿದ್ರೆಯ ಸಮಸ್ಯೆಗೆ ಕಾರಣವಾಗಬಹುದು.

Want to stay updated ?

x

Download our Android app and stay updated with the latest happenings!!!


90K+ people are using this