facebook pixel
chevron_right Sports
transparent
ಡೆನ್ಮಾರ್ಕ್ ಓಪನ್: ಸೈನಾ, ಕಿಡಂಬಿ ಸೆಮೀಸ್‌ಗೆ ಲಗ್ಗೆ
ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಹಾಗೂ ಕಿಡಂಬಿ ಶ್ರೀಕಾಂತ್ , ಪ್ರತಿಷ್ಠಿತ ಡೆನ್ಮಾರ್ಕ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಅನುಕ್ರಮವಾಗಿ ಮಹಿಳಾ ಹಾಗೂ ಪುರುಷ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಮುಖಾಮುಖಿಯಲ್ಲಿ ಜಪಾನ್‌ನ ಓಕುಹಾರಾ ಅವರನ್ನು 17-21, 21-16, 21-12ರ ಕಠಿಣ ಅಂತರದಲ್ಲಿ ಮಣಿಸಿದ ಸೈನಾ ಅಂತಿಮ ನಾಲ್ಕರ ಘಟ್ಟಕ್ಕೆ ಮುನ್ನಡೆದರು. ಸೈನಾ ಹಾಗೂ ಓಕುಹಾರಾ ನಡುವಣ ಮ್ಯಾರಥನ್ ಹೋರಾಟ 58 ನಿಮಿಷಗಳ ವರೆಗೂ ಸಾಗಿತ್ತು. ಮೊದಲ ಸೆಟ್ ಕಳೆದುಕೊಂಡರೂ ಎದೆಗುಂದದ ಸೈನಾ, ನಂತರದ ಎರಡು ಸೆಟ್ ವಶಪಡಿಸಿಕೊಳ್ಳುವ ಮೂಲಕ ಪಂದ್ಯ ವಶಪಡಿಸಿಕೊಂಡರು.
ಇಂದು ಮುಂಬೈ-ದೆಹಲಿ ಫೈನಲ್
ಶಿಸ್ತಿನ ಬೌಲಿಂಗ್ ನಿರ್ವಹಣೆಯೊಂದಿಗೆ ಗುರುವಾರ ಸೆಮೀಸ್ ಹೋರಾಟ ಗೆದ್ದಿರುವ ಗೌತಮ್ ಗಂಭೀರ್ ಸಾರಥ್ಯದ ದೆಹಲಿ ತಂಡ ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಶಸ್ತಿಗಾಗಿ ಬಲಿಷ್ಠ ಮುಂಬೈ ವಿರುದ್ಧ ಹೋರಾಡಲಿದೆ. ಅಜಿಂಕ್ಯ ರಹಾನೆ, ಪೃಥ್ವಿ ಷಾರ ಬಲವಿರುವ ಮುಂಬೈಯನ್ನು ಸೋಲಿಸಿ ದೆಹಲಿ 5 ವರ್ಷಗಳ ನಂತರ ಮೊದಲ ಸಲ ವಿಜಯ್ ಹಜಾರೆ ಟ್ರೋಫಿ ಗೆಲ್ಲುವ ಗುರಿಯಲ್ಲಿದೆ. ರೋಚಕ ಹೋರಾಟ ಸೆಮಿಫೈನಲ್​ನಲ್ಲಿ ದೆಹಲಿ 2 ವಿಕೆಟ್​ಗಳಿಂದ ಜಾರ್ಖಂಡ್ ತಂಡವನ್ನು ಸೋಲಿಸಿತು. ಟಾಸ್ ಸೋತು ಬ್ಯಾಟಿಂಗ್ ಇಳಿದ ಜಾರ್ಖಂಡ್ ತಂಡ, ವೇಗಿ ನವದೀಪ್ ಸೈನಿ(30ಕ್ಕೆ 4) ಮತ್ತು ಕುಲ್ವಂತ್ ಖೆಜ್ರೋಲಿಯಾ(31ಕ್ಕೆ 2) ಸಂಘಟಿತ ದಾಳಿಗೆ 48.5 ಓವರ್​ಗಳಲ್ಲಿ 199 ರನ್​ಗೆ ಆಲೌಟಾಯಿತು. ಈ ಸವಾಲು ಬೆನ್ನಟ್ಟಿದ ದೆಹಲಿ ಒಂದು ಹಂತದಲ್ಲಿ 37.5 ಓವರ್​ಗಳಲ್ಲಿ 149 ರನ್​ಗೆ 8 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖಮಾಡಿತ್ತು.
ಟೆಸ್ಟ್ ಸರಣಿ ಗೆದ್ದ ಪಾಕಿಸ್ತಾನ ತಂಡ
ಪಾಕಿಸ್ತಾನ ತಂಡ ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-0ಯಿಂದ ಜಯಿಸಿದೆ. ಅಂತಿಮ ಪಂದ್ಯದಲ್ಲಿ ಪಾಕ್ ತಂಡ ವೇಗಿ ಮೊಹಮದ್ ಅಬ್ಬಾಸ್(62ಕ್ಕೆ 5) ದಾಳಿಯ ನೆರವಿನಿಂದ 373 ರನ್​ಗಳಿಂದ ಜಯಿಸಿತು. ದ್ವಿತೀಯ ಇನಿಂಗ್ಸ್​ನಲ್ಲಿ 9 ವಿಕೆಟ್​ಗೆ 400 ರನ್ ಪೇರಿಸಿ ಡಿಕ್ಲೇರ್ ಘೋಷಿಸಿದ ಪಾಕ್ ತಂಡ ಆಸ್ಟ್ರೇಲಿಯಾ ಗೆಲುವಿಗೆ 538 ರನ್​ಗಳ ಕಠಿಣ ಸವಾಲು ನೀಡಿತು. ಈ ಸವಾಲು ಬೆನ್ನಟ್ಟಿದ ಆಸೀಸ್ 4ನೇ ದಿನವಾದ ಗುರುವಾರವೆ ಕೇವಲ 164 ರನ್​ಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಪಾಕಿಸ್ತಾನ: 282 ಮತ್ತು 9 ವಿಕೆಟ್​ಗೆ 400ಡಿ. (ಬಾಬರ್ ಆಜಮ್ 99, ಸರ್ಫ್ರಾಜ್ 81, ಲ್ಯಾನ್ 135ಕ್ಕೆ 4), ಆಸ್ಟ್ರೇಲಿಯಾ: 145 ಮತ್ತು 49.4 ಓವರ್​ಗಳಲ್ಲಿ 164 (ಫಿಂಚ್ 31, ಹೆಡ್ 36, ಮೊಹಮದ್ ಅಬ್ಬಾಸ್ 62ಕ್ಕೆ 5).
ಇಂದಿನಿಂದ ವಿಶ್ವ ಕುಸ್ತಿ ಚಾಂಪಿಯನ್​ಷಿಪ್
ಏಷ್ಯನ್ ಗೇಮ್್ಸ ಸ್ವರ್ಣ ಪದಕ ವಿಜೇತ ಭಜರಂಗ್ ಪೂನಿಯಾ ನೇತೃತ್ವದಲ್ಲಿ ಭಾರತ ತಂಡ ಶನಿವಾರ ಆರಂಭವಾಗಲಿರುವ ವಿಶ್ವ ಕುಸ್ತಿ ಚಾಂಪಿಯನ್​ಷಿಪ್​ನಲ್ಲಿ ಸ್ಪರ್ಧೆಗಿಳಿಯಲಿದೆ. ಕಳೆದ ವರ್ಷ ಪ್ಯಾರಿಸ್​ನಲ್ಲಿ ನಡೆದಿದ್ದ ಕೂಟದಲ್ಲಿ ಭಾರತದ 24 ಕುಸ್ತಿಪಟುಗಳು ಸ್ಪರ್ಧೆ ಮಾಡಿದ್ದರೂ, ಪದಕ ಗೆಲ್ಲುವಲ್ಲಿ ವಿಫಲವಾಗಿತ್ತು. ಆದರೆ, ಈ ಬಾರಿ ಬಲಿಷ್ಠ 30 ರೆಸ್ಲರ್​ಗಳ ತಂಡ ಹಂಗೆರಿಯ ರಾಜಧಾನಿಗೆ ತೆರಳಿದ್ದು, ಗರಿಷ್ಠ ಪದಕದ ವಿಶ್ವಾಸದಲ್ಲಿದೆ. 2013ರ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಜರಂಗ್, ಪುರುಷರ 65 ಕೆಜಿ ವಿಭಾಗದ ಫ್ರೀಸ್ಟೈಲ್​ನಲ್ಲಿ ಫೇವರಿಟ್ ಎನಿಸಿದ್ದಾರೆ. ಟರ್ಕಿಯ ಅಗ್ರ ಶ್ರೇಯಾಂಕದ ಸೆಲಾಹತಿನ್ ಕಿಲಿಕ್​ಸಲ್ಯಾನ್, ಭಜರಂಗ್​ಗೆ ಸವಾಲು ನೀಡಬಲ್ಲ ಏಕೈಕ ರೆಸ್ಲರ್ ಎನಿಸಿದ್ದಾರೆ. ಮೊಣಕೈ ಗಾಯದಿಂದಾಗಿ ವಿನೇಶ್ ಪೋಗಟ್ ಸ್ಪರ್ಧೆ ಮಾಡುತ್ತಿಲ್ಲ. ಉಳಿದಂತೆ ರಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಮೇಲೆ ನಿರೀಕ್ಷೆ ಇದೆ.
ಕ್ಲಬ್ ಆಫರ್ ನಿರಾಕರಿಸಿದ ಬೋಲ್ಟ್
ಮಾಜಿ ಸ್ಟಾರ್ ಸ್ಪಿ್ರಟರ್ ಉಸೇನ್ ಬೋಲ್ಟ್ ಮಾಲ್ಟಾ ಫುಟ್​ಬಾಲ್ ಕ್ಲಬ್ ವೆಲೆಟ್ಟಾ ನೀಡಿರುವ ಆಫರ್ ಅನ್ನು ನಿರಾಕರಿಸಿದ್ದಾರೆ. ಆಸ್ಟ್ರೇಲಿಯಾದದ ಸೆಂಟ್ರಲ್ ಕೋಸ್ಟ್ ಮರೀನರ್ಸ್ ಪರ ಆಡುತ್ತಿರುವ ಬೋಲ್ಟ್​ಗೆ ವೆಲೆಟ್ಟಾ ಕ್ಲಬ್​ಗೆ ಸೇರುವ ಆಫರ್ ಬಂದಿತ್ತು. ಹಲವು ಕ್ಲಬ್​ಗಳು ಬೋಲ್ಟ್​ರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರಿವೆ. ಆದರೆ ಬೋಲ್ಟ್ ವೆಲೆಟ್ಟಾ ಕ್ಲಬ್​ಗೆ ಸೇರುವುದಿಲ್ಲ. ಆಸ್ಟ್ರೇಲಿಯಾ ಕ್ಲಬ್ ಜತೆ ವೃತ್ತಿಜೀವನವನ್ನು ಮುಂದುವರಿಸಲಿದ್ದಾರೆ ಎಂದು ಬೋಲ್ಟ್ ಏಜೆಂಟ್ ರಿಕಿ ಸಿಮ್್ಸ ಖಚಿತಪಡಿಸಿದ್ದಾರೆ. ಕಳೆದ ಆಗಸ್ಟ್​ನಲ್ಲಿ ಬೋಲ್ಟ್ ಸೆಂಟ್ರಲ್ ಕೋಸ್ಟ್ ಮರೀನರ್ಸ್ ಕ್ಲಬ್ ಪರ ಲೆಫ್ಟ್ ವಿಂಗರ್ ಆಗಿ ಫುಟ್​ಬಾಲ್ ಜೀವನ ಆರಂಭಿಸಿದ್ದರಲ್ಲದೆ ಸೌಹಾರ್ದಯುತ ಪಂದ್ಯದಲ್ಲಿ ಈಗಾಗಲೆ 2 ಗೋಲು ಬಾರಿಸಿದ್ದಾರೆ.
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಭಾರತ ಶುಭಾರಂಭ
ಯುವ ಸ್ಟ್ರೈಕರ್ ದಿಲ್​ಪ್ರೀತ್ ಸಿಂಗ್ ಬಾರಿಸಿದ ಹ್ಯಾಟ್ರಿಕ್ ಗೋಲಿನ ಸಾಹಸದ ನೆರವಿನಿಂದ ಭಾರತ ತಂಡ 4ನೇ ಆವೃತ್ತಿಯ ಏಷ್ಯನ್ ಚಾಂಪಿಯನ್ಸ್ ಟ್ರೋಫಿ (ಎಸಿಟಿ) ಹಾಕಿ ಟೂರ್ನಿಯನ್ನು ಭರ್ಜರಿ ಗೆಲುವಿನೊಂದಿಗೆ ಆರಂಭಿಸಿದೆ. ಗುರುವಾರ ನಡೆದ ಆರಂಭಿಕ ಪಂದ್ಯದಲ್ಲಿ ಭಾರತ ತಂಡ 11-0 ಗೋಲುಗಳಿಂದ ಆತಿಥೇಯ ಓಮನ್ ತಂಡವನ್ನು ಸೋಲಿಸುವ ಮೂಲಕ ಪ್ರಶಸ್ತಿ ಉಳಿಸಿಕೊಳ್ಳುವ ಅಭಿಯಾನವನ್ನು ಆರಂಭಿಸಿತು. ಮೊದಲ ಕ್ವಾರ್ಟರ್​ನ ಅವಧಿಯಲ್ಲಿ ಭಾರತ ಗೋಲು ಬಾರಿಸಲು ವಿಫಲವಾಗಿತ್ತು. ಲಲಿತ್ ಉಪಾಧ್ಯಾಯ 17ನೇ ನಿಮಿಷದಲ್ಲಿ ಬಾರಿಸಿದ ಗೋಲಿನ ಮೂಲಕ ಖಾತೆ ತೆರೆದ ಭಾರತ ಆ ಬಳಿಕ ನಿರಂತರವಾಗಿ ಓಮನ್ ತಂಡದ ಮೇಲೆ ಎರಗಿತು. 2ನೇ ಕ್ವಾರ್ಟರ್​ನ ಅವಧಿಯಲ್ಲಿ ಹರ್ವನ್​ಪ್ರೀತ್ ಸಿಂಗ್ (22), ನೀಲಕಂಠ ಶರ್ಮ (23) ಹಾಗೂ ಮಂದೀಪ್ ಸಿಂಗ್ (30) ಗೋಲು ಸಿಡಿಸಿದರು.
ಅಭ್ಯಾಸ ನಡೆಸಿದ ಭಾರತ
ಈಶಾನ್ಯ ರಾಜ್ಯಗಳ ಪಾಲಿನ ಪ್ರಮುಖ ಸ್ಟೇಡಿಯಂ ಆಗಿರುವ ಅಸ್ಸಾಂನ ರಾಜಧಾನಿ ಗುವಾಹಟಿಯಲ್ಲಿ ಭಾನುವಾರ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಏಕದಿನ ಸರಣಿಗೆ ಚಾಲನೆ ಸಿಗಲಿದೆ. ಟೆಸ್ಟ್ ಸರಣಿಯನ್ನು 2-0ಯಿಂದ ಗೆದ್ದಿರುವ ಭಾರತ ತಂಡ, ಏಕದಿನ ಸರಣಿಯಲ್ಲೂ ಪಾರಮ್ಯ ಸಾಧಿಸುವ ಗುರಿಯೊಂದಿಗೆ ಶುಕ್ರವಾರ ಡಾ. ಭೂಪೆನ್ ಹಜಾರಿಕಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸಿತು. ಬಿಸಿಸಿಐ ತನ್ನ ಟ್ವಿಟರ್ ಹಾಗೂ ಫೇಸ್​ಬುಕ್ ಪುಟದಲ್ಲಿ ಅಭ್ಯಾಸ ಚಿತ್ರಗಳನ್ನು ಪ್ರಕಟಿಸಿದೆ. ಏಷ್ಯಾಕಪ್ ಟೂರ್ನಿಯನ್ನು ವಿಶ್ರಾಂತಿ ಕಾರಣ ತಪ್ಪಿಸಿಕೊಂಡಿದ್ದ ವಿರಾಟ್ ಕೊಹ್ಲಿ, ಮಾಜಿ ನಾಯಕ ಎಂಎಸ್ ಧೋನಿ, ಕೆಎಲ್ ರಾಹುಲ್, ಉಮೇಶ್ ಯಾದವ್ ಹಾಗೂ ಮೊಹಮದ್ ಶಮಿ ಜತೆಗೂಡಿ ಫುಟ್​ಬಾಲ್ ಆಟವಾಡಿದರು.
ಭಾರತ ಎ ತಂಡ ವೈಟ್​ವಾಷ್
ಭಾರತ ಮಹಿಳಾ ಎ ತಂಡ ಪ್ರವಾಸಿ ಆಸ್ಟ್ರೇಲಿಯಾ ಎ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲೂ ಸೋಲು ಕಾಣುವ ಮೂಲಕ ವೈಟ್​ವಾಷ್ ಎದುರಿಸಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್​ಗಳಿಂದ ಆಸ್ಟ್ರೇಲಿಯಾಕ್ಕೆ ಶರಣಾಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ ನಾಯಕಿ ಪೂನಮ್ ರಾವತ್ (98ರನ್, 123 ಎಸೆತ, 16 ಬೌಂಡರಿ) ಆಕರ್ಷಕ ಇನಿಂಗ್ಸ್ ನೆರವಿನಿಂದ 8 ವಿಕೆಟ್​ಗೆ 254 ರನ್​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. ಪ್ರತಿಯಾಗಿ ಆಸ್ಟ್ರೇಲಿಯಾ, ಜಾರ್ಜಿಯಾ ರೆಡ್ಮಯ್್ನ (98ರನ್, 123 ಎಸೆತ, 10 ಬೌಂಡರಿ) ನೆರವಿನಿಂದ 44.3 ಓವರ್​ಗಳಲ್ಲಿ 5 ವಿಕೆಟ್​ಗೆ 257 ರನ್ ಬಾರಿಸಿ ಗೆಲುವು ಕಂಡಿತು. ಮೊದಲೆರಡು ಏಕದಿನ ಪಂದ್ಯಗಳಲ್ಲಿ ಭಾರತ ಕ್ರಮವಾಗಿ 91 ರನ್ ಹಾಗೂ 4 ವಿಕೆಟ್​ಗಳಿಂದ ಸೋತಿತ್ತು.
ಕ್ವಾರ್ಟರ್ ಫೈನಲ್​ಗೆ ಸೈನಾ, ಶ್ರೀಕಾಂತ್
ವೃತ್ತಿ ಜೀವನದ 2ನೇ ಡೆನ್ಮಾರ್ಕ್ ಓಪನ್ ಪ್ರಶಸ್ತಿ ಗೆಲುವಿನ ಗುರಿಯಲ್ಲಿರುವ ಭಾರತದ ಅಗ್ರ ಷಟ್ಲರ್​ಗಳಾದ ಸೈನಾ ನೆಹ್ವಾಲ್ ಮತ್ತು ಹಾಲಿ ಚಾಂಪಿಯನ್ ಕಿಡಂಬಿ ಶ್ರೀಕಾಂತ್ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ. ಅಲ್ಲದೆ ಸಮೀರ್ ವರ್ಮ, ಮಹಿಳಾ ಡಬಲ್ಸ್​ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್ ಸಿಕ್ಕಿ ರೆಡ್ಡಿ ಕೂಡ ಕಠಿಣ ಹೋರಾಟದೊಂದಿಗೆ ಜಯಿಸಿದರು. ಫೇವರಿಟ್ ಎನಿಸಿಕೊಂಡಿದ್ದ ಸಿಂಧು ಮೊದಲ ಸುತ್ತಿನಲ್ಲೆ ಶಾಕ್ ಎದುರಿಸಿದ ನಂತರ ಮಹಿಳಾ ಸಿಂಗಲ್ಸ್​ನಲ್ಲಿ ಏಕೈಕ ಭರವಸೆಯಾಗಿರುವ ಸೈನಾ ಕೇವಲ 36 ನಿಮಿಷಗಳಲ್ಲಿ 2ನೇ ಸುತ್ತಿನ ಪಂದ್ಯವನ್ನು ಗೆದ್ದರು. ಒಲಿಂಪಿಕ್ ಪದಕ ವಿಜೇತೆ ಸೈನಾ ಪ್ರಿ ಕ್ವಾರ್ಟರ್ ಫೈನಲ್​ನಲ್ಲಿ ವಿಶ್ವ ನಂ.2 ಜಪಾನ್ ಷಟ್ಲರ್ ಅಕಾನೆ ಎಮಗುಚಿಯನ್ನು 21-15, 21-17ರ ನೇರ ಗೇಮ್ಳಿಂದ ಮಣಿಸಿದರು.
ಟೈಟಾನ್ಸ್ ಟ್ಯಾಕಲ್​ಗೆ ಸಿಲುಕಿದ ಪಟನಾ
ಅಂತಿಮ ಕ್ಷಣದವರೆಗೆ ಕುತೂಹಲ ಮೂಡಿಸಿದ್ದ ಪ್ರೊ ಕಬಡ್ಡಿ ಲೀಗ್​ನ ಪುಣೆ ಚರಣದ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡ ಗೆಲುವಿನ ನಗೆ ಬೀರಿತು. ಶ್ರೀ ಶಿವ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್​ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ತೆಲುಗು ಟೈಟಾನ್ಸ್ 35-31 ಅಂಕಗಳಿಂದ ಹಾಲಿ ಚಾಂಪಿಯನ್ ಪಟನಾ ಪೈರೇಟ್ಸ್​ಗೆ ಸೋಲುಣಿಸುವ ಮೂಲಕ ಗೆಲುವಿನ ಲಯಕ್ಕೆ ಮರಳಿತು. ಲೀಗ್​ನಲ್ಲಿ ಮೊದಲ ಬಾರಿ ಮುಖಾಮುಖಿಯಾದ ಉಭಯ ತಂಡಗಳು ರೋಚಕ ಕಾದಾಟ ನಡೆಸಿದವು. ಬಲಿಷ್ಠ ಟ್ಯಾಕಲ್ ವಿಭಾಗವಿದ್ದ ಟೈಟಾನ್ಸ್​ಗೆ ರೈಡಿಂಗ್ ಶಕ್ತಿಯಿರುವ ಪಟನಾ ನಿಯಂತ್ರಣ ಹೇರಲು ವಿಫಲವಾಯಿತು. ಬಲಿಷ್ಠ ಡಿಫೆಂಡರ್​ಗಳಾದ ಅಬೋಜರ್ ಮಿಘಾನಿ ಮತ್ತು ವಿಶಾಲ್ ಭಾರಧ್ವಜ್(6) ಟೈಟಾನ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಆರ್ಚರಿಯಲ್ಲಿ ಬೆಳ್ಳಿ ಪದಕ ಗೆದ್ದ ಆಕಾಶ್ ಮಲಿಕ್
ಯುವ ಒಲಿಂಪಿಕ್ಸ್​ನ ಅಂತಿಮ ದಿನ ಭಾರತ ಪದಕ ಗೆಲ್ಲುವಲ್ಲಿ ವಿಫಲವಾದರೂ, ಒಟ್ಟಾರೆ 13 ಪದಕಗಳೊಂದಿಗೆ ಪದಕಪಟ್ಟಿಯಲ್ಲಿ 17ನೇ ಸ್ಥಾನ ಪಡೆದು ಗೇಮ್್ಸ ಮುಗಿಸಿದೆ. ಪುರುಷರ ವಿಭಾಗದ ಆರ್ಚರಿಯಲ್ಲಿ ಆಕಾಶ್ ಮಲಿಕ್ ಗುರುವಾರ ಬೆಳ್ಳಿ ಪದಕ ಗೆಲ್ಲುವ ಮೂಲಕ ಗಮನಸೆಳೆದರು. ಆರ್ಚರಿ ವಿಭಾಗದಲ್ಲಿ ಭಾರತದ ಮೊದಲ ಯುವ ಒಲಿಂಪಿಕ್ಸ್ ಬೆಳ್ಳಿ ಪದಕ ಇದಾಗಿದೆ. ರಷ್ಯಾ 29 ಸ್ವರ್ಣ, 18 ಬೆಳ್ಳಿ, 22 ಕಂಚಿನೊಂದಿಗೆ 59 ಪದಕ ಗೆದ್ದು ಅಗ್ರಸ್ಥಾನ ಸಂಪಾದಿಸಿತು. ಫೈನಲ್​ನಲ್ಲಿ 15 ವರ್ಷದ ಹರಿಯಾಣ ಆರ್ಚರ್ ಆಕಾಶ್ 0-6 ರಿಂದ ಅಮೆರಿಕದ ಟ್ರೆಂಟನ್ ಕೋವೆಲ್ಸ್​ಗೆ ಶರಣಾಗುವ ಮೂಲಕ ರಜತ ಪದಕಕ್ಕೆ ತೃಪ್ತಿಪಟ್ಟರು. ಅದರೊಂದಿಗೆ ಕೂಟದಲ್ಲಿ ಭಾರತ 3 ಚಿನ್ನ, 9 ಬೆಳ್ಳಿ ಹಾಗೂ 1 ಕಂಚಿನೊಂದಿಗೆ 13 ಪದಕ ಸಾಧನೆ ಮಾಡಿದೆ.
ವೀಕೆಂಡ್‌ನಲ್ಲಿ ಸಚಿನ್‌ಗೆ ಅಚ್ಚರಿಯ ಭೇಟಿ ನೀಡಿದ ಆಪ್ತ ಸ್ನೇಹಿತ
ನವರಾತ್ರಿ ಹಬ್ಬದ ಸುಸಂದರ್ಭದಲ್ಲಿ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿ ಮಾಡಲು ಆತಿಥಿಯೊಬ್ಬರು ಆಗಮಿಸಿದ್ದರು. ಅವರ ಭೇಟಿ ನಿಜಕ್ಕೂ ಸಚಿನ್ ಪಾಲಿಗೆ ಅಚ್ಚರಿ ಕಾದಿತ್ತು. ಹೌದು, ಅವರು ಬೇರೆ ಯಾರೂ ಅಲ್ಲ. ವೆಸ್ಟ್‌ಇಂಡೀಸ್‌ನ ಮಾಜಿ ಕ್ರಿಕೆಟ್ ದಿಗ್ಗಜ ಬ್ರ್ಯಾನ್ ಲಾರಾ. ತಮ್ಮ ಆಡುವ ಕಾಲದಲ್ಲಿ ಮೈದಾನದಲ್ಲಿ ಬ್ಯಾಟ್ ಮೂಲಕ ಪರಸ್ಪರ ಜಿದ್ದಾಜಿದ್ದಿನ ಪೈಪೋಟಿ ನಡೆಸುತ್ತಿದ್ದ ಸಚಿನ್ ಹಾಗೂ ಲಾರಾ ಮೈದಾನದ ಹೊರಗಡೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಇದೇ ಕಾರಣಕ್ಕಾಗಿ ಆಪ್ತ ಸ್ನೇಹಿತನ ಆಗಮನವನ್ನು ಸಚಿನ್ ಸಾಮಾಜಿಕ ಜಾಲತಾಣಗಳ ಮೂಖಾಂತರ ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಕ್ರಿಕೆಟ್‌ ಲೋಕದಲ್ಲಿ ಸಚಿನ್ ಹಾಗೂ ಲಾರಾ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳೆಂದು ಪರಿಗಣಿಸಲಾಗುತ್ತಿದೆ. ಇದೀಗ ಸಚಿನ್ ತೆಂಡೂಲ್ಕರ್ ಜೊತೆಗೆ ಸಂತಸದ ಕ್ಷಣಗಳನ್ನು ಕಳೆಯಲು ಲಾರಾ ಜೊತೆಗೂಡಿದ್ದಾರೆ.
ಟೆಸ್ಟ್ ರ‍್ಯಾಂಕಿಂಗ್: ಆಸೀಸ್ 5ನೇ ಸ್ಥಾನಕ್ಕೆ ಕುಸಿತ
ಪಾಕಿಸ್ತಾನ ವಿರುದ್ಧ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಹೀನಾಯ ಸೋಲಿಗೆ ಗುರಿಯಾಗಿರುವ ಆಸ್ಟ್ರೇಲಿಯಾ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿರುವ ತಾಜಾ ಟೆಸ್ಟ್ ತಂಡ ರ‍್ಯಾಂಕಿಂಗ್ ಪಟ್ಟಿಯಲ್ಲಿ ಎರಡು ಸ್ಥಾನಗಳ ಇಳಿಕೆ ಕಂಡು ಐದನೇ ಸ್ಥಾನಕ್ಕೆ ಕುಸಿದಿದೆ. ಸರಣಿ ಆರಂಭಕ್ಕೂ ಮುನ್ನ 106 ಅಂಕಗಳನ್ನು ಹೊಂದಿರುವ ಆಸೀಸ್, ದಶಾಂಶ ಪದ್ಧತಿ ಪ್ರಕಾರ ದಕ್ಷಿಣ ಆಫ್ರಿಕಾ ಬಳಿಕ ಮೂರನೇ ಸ್ಥಾನದಲ್ಲಿತ್ತು. ಇದೀಗ ನಾಲ್ಕು ಅಂಕಗಳನ್ನು ಕಳೆದುಕೊಳ್ಳುವ ಮೂಲಕ ಐದನೇ ಸ್ಥಾನಕ್ಕೆ ಕುಸಿದಿದೆ. ಇದೀಗಷ್ಟೇ ಅಬುದಾಬಿಯಲ್ಲಿ ಅಂತ್ಯಗೊಂಡ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಸೀಸ್ ವಿರುದ್ಧ ಪಾಕಿಸ್ತಾನ 373 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು. ಹಾಗಿದ್ದರೂ ಪಾಕ್ ಏಳನೇ ರ‍್ಯಾಂಕಿಂಗ್ ಸ್ಥಾನದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದರೂ ಏಳು ರೇಟಿಂಗ್ ಅಂಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಅಬ್ಬಾಸ್‌ಗೆ 10 ವಿಕೆಟ್; ಆಸೀಸ್ ಮಣಿಸಿದ ಪಾಕ್‌ಗೆ ಸರಣಿ ಗೆಲುವು
ಎರಡು ಇನ್ನಿಂಗ್ಸ್‌ಗಳಲ್ಲಿ ತಲಾ ಐದು ವಿಕೆಟುಗಳು ಸೇರಿದಂತೆ ಪಂದ್ಯದಲ್ಲಿ ಒಟ್ಟು 10 ವಿಕೆಟ್ ಕಬಳಿಸಿರುವ ಮೊಹಮ್ಮದ್ ಅಬ್ಬಾಸ್ ಮಾರಕ ದಾಳಿ ನೆರವಿನಿಂದ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 373 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಪಾಕಿಸ್ತಾನ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಮೊದಲ ಟೆಸ್ಟ್ ಪಂದ್ಯ ಸಮಬಲದಲ್ಲಿ ಅಂತ್ಯಗೊಂಡಿತ್ತು. ಆದರೆ ದ್ವಿತೀಯ ಟೆಸ್ಟ್‌ನಲ್ಲಿ ಆಸೀಸ್ ‌ಮೇಲೆ ಪಾಕ್ ಪರಾಕ್ರಮವವನ್ನು ಮೆರೆದಿದೆ. ಗೆಲುವಿಗಾಗಿ ಅಂತಿಮ ಇನ್ನಿಂಗ್ಸ್‌ನಲ್ಲಿ ಅಸಾಧ್ಯವೆಂಬ 538 ರನ್ ಗುರಿ ಬೆನ್ನಟ್ಟಿದ ಆಸೀಸ್ 164 ರನ್‌ಗಳಿಗೆ ಸರ್ವಪತನವನ್ನು ಕಂಡಿತ್ತು. ಪಾಕ್ ಪರ 62 ರನ್ ತೆತ್ತ ಅಬ್ಬಾಸ್ ಐದು ವಿಕೆಟುಗಳನ್ನು ಕಿತ್ತ ಮೊಹಮ್ಮದ್ ಅಬ್ಬಾಸ್ ಗೆಲುವಿನ ರೂವಾರಿ ಎನಿಸಿಕೊಂಡರು.
ಏಕದಿನ ಸರಣಿ; ಟೀಮ್ ಇಂಡಿಯಾ ತಾಲೀಮು
ವೆಸ್ಟ್‌ಇಂಡೀಸ್ ವಿರುದ್ಧ ಆರಂಭವಾಗಲಿರುವ ಐದು ಪಂದ್ಯಗಳ ಏಕದಿನ ಸರಣಿಗೂ ಮುಂಚಿತವಾಗಿ ಟೀಮ್ ಇಂಡಿಯಾ ಅಭ್ಯಾಸವನ್ನು ಆರಂಭಿಸಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಏಕದಿನ ಸರಣಿಯಲ್ಲೂ ಇದಕ್ಕೆ ಸಮಾನವಾದ ನಿರ್ವಹಣೆ ನೀಡುವ ಇರಾದೆಯಲ್ಲಿದೆ. ರಾಜ್‌ಕೋಟ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 272 ರನ್ ಅಂತರದ ದಾಖಲೆಯ ಅಂತರದ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಹೈದರಾಬಾದ್‌ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಅಂತರದ ಅಧಿಕಾರಯುತ ಗೆಲುವು ದಾಖಲಿಸಿತ್ತು. ಇದೀಗ ಏಕದಿನ ಸರಣಿಯ ಮೊದಲ ಪಂದ್ಯವು ಅಕ್ಟೋಬರ್ 21 ಭಾನುವಾರದಂದು ನಡೆಯಲಿದೆ. ಏಕದಿನ ಸರಣಿಯ ಬಳಿಕ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲೂ ಭಾಗವಹಿಸಲಿದೆ.
ಒಮಾನ್ ವಿರುದ್ದ 11-0 ಗೋಲುಗಳ ಅಂತರದ ಭರ್ಜರಿ ಗೆಲುವು
ಭಾರತದ ಪುರುಷರ ಹಾಕಿ ತಂಡ ಇಲ್ಲಿ ಆರಂಭವಾಗಿರುವ 5ನೇ ಪುರುಷರ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಗುರುವಾರ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಒಮಾನ್‌ ವಿರುದ್ಧ 11-0 ಗೋಲುಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಭಾರತ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದ್ದು, ಇದರಂತೆ ಒಮಾನ್ ವಿರುದ್ಧ ಭರ್ಜರಿ ಗೆಲುವಿನ ಮೂಲಕ ಶುಭಾರಂಭ ಮಾಡಿಕೊಂಡಿದೆ. ವಿಶ್ವದ 5ನೇ ರಾರ‍ಯಂಕ್‌ನಲ್ಲಿರುವ ಭಾರತ ಏಷ್ಯನ್‌ ಟೂರ್ನಿಯಲ್ಲೇ ಉನ್ನತ ರಾರ‍ಯಂಕ್‌ ಹೊಂದಿರುವ ರಾಷ್ಟ್ರವಾಗಿದೆ. ಇದರಂತೆ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಭರ್ಜರಿ ಪ್ರದರ್ಶನ ನೀಡಿದೆ. ಹ್ಯಾಟ್ರಿಕ್ ಗೋಲುಗಳನ್ನು ಬಾರಿಸಿದ ದಿಲ್‌ಪ್ರೀತ್ ಭಾರತದ ಗೆಲುವಿನ ರೂವಾರಿ ಎನಿಸಿಕೊಂಡರು.
ಲಿನ್ ಸವಾಲು ಮೆಟ್ಟಿ ನಿಂತ ಕಿಡಂಬಿ ಕ್ವಾರ್ಟರ್‌ಗೆ ಲಗ್ಗೆ
ಭಾರತ ಅಗ್ರ ಪುರುಷ ಬ್ಯಾಡ್ಮಿಂಟನ್ ಪಟು ಕಿಡಂಬಿ ಶ್ರೀಕಾಂತ್ , ಪ್ರತಿಷ್ಠಿತ ಡೆನ್ಮಾರ್ಕ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಶುಕ್ರವಾರ ಪುರುಷ ಸಿಂಗಲ್ಸ್ ವಿಭಾಗದಲ್ಲಿ ನಡೆದ ಎರಡನೇ ಸುತ್ತಿನ ಹೋರಾಟದಲ್ಲಿ ಐದು ಬಾರಿಯ ವರ್ಲ್ಡ್ ಚಾಂಪಿಯನ್ ಚೀನಾದ ಲಿನ್ ಡ್ಯಾನ್ ವಿರುದ್ಧ 18-21, 21-17, 21-16ರ ಕಠಿಣ ಅಂತರದ ಗೆಲುವು ದಾಖಲಿಸಿ ಮುನ್ನಡೆದರು. 2 ಬಾರಿಯ ಒಲಿಂಪಿಕ್‌ ಚಾಂಪಿಯನ್‌ ಆಗಿರುವ ಲಿನ್‌ ವಿರುದ್ಧ ಶ್ರೀಕಾಂಕ್‌ಗೆ ನೈಜ ಅಗ್ನಿ ಪರೀಕ್ಷೆ ಎದುರಾಗಿತ್ತು. ಯಾಕೆಂದರೆ ಆರು ಬಾರಿಯ ಆಲ್‌ ಇಂಗ್ಲೆಂಡ್‌ ಓಪನ್‌ ಚಾಂಪಿಯನ್‌ ಡ್ಯಾನ್‌ 2014ರ ಚೀನಾ ಓಪನ್‌ ಸೂಪರ್‌ ಸೀರೀಸ್‌ ಪ್ರೀಮಿಯರ್‌ ಫೈನಲ್‌ನಲ್ಲಿ ಶ್ರೀಕಾಂತ್‌ಗೆ ಸೋತಿದ್ದು ಹೊರತುಪಡಿಸಿದರೆ ಇಲ್ಲಿಯ ತನಕ ಪ್ರತಿಷ್ಠಿತ ಟೂರ್ನಿಗಳಲ್ಲಿ ಭಾರತೀಯ ಆಟಗಾರನಿಗೆ ಸೋತ ಉದಾಹರಣೆಯೇ ಇಲ್ಲ.
ಬೌಲಿಂಗ್ ಆ್ಯಕ್ಷನ್ ಬಗ್ಗೆ ತಲೆಕೆಡಿಸಿಕೊಳ್ಳಲಾರೆ: ಬುಮ್ರಾ
ನನ್ನ ಬೌಲಿಂಗ್ ಶೈಲಿ ಬಗ್ಗೆ ಜನರು ಏನು ಹೇಳುತ್ತಾರೆಂಬುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲಾರೆ ಎಂದು ಭಾರತ ಕ್ರಿಕೆಟ್ ತಂಡದ ಬಲಗೈ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಹೇಳಿದ್ದಾರೆ. ತನ್ನದೇ ಆದ ವಿಶಿಷ್ಟ ರೀತಿಯ ಬೌಲಿಂಗ್ ಶೈಲಿಯನ್ನು ಹೊಂದಿರುವ ಬುಮ್ರಾ, ಟೀಮ್ ಇಂಡಿಯಾ ಪ್ರವೇಶಿಸಿದ ಕಿರು ಅವಧಿಯಲ್ಲೇ ಸೀಮಿತ ಓವರ್‌ಗಳ ಜೊತೆಗೆ ಟೆಸ್ಟ್ ಕ್ರಿಕೆಟ್‌ನಲ್ಲೂ ಯಶ ಸಾಧಿಸಿದ್ದಾರೆ. ಸ್ಲಾಗ್ ಓವರ್‌ನಲ್ಲಿ ಬುಮ್ರಾ ಮಾಡುವ ನಿಖರ ಯಾರ್ಕರ್ ದಾಳಿಯ ಬಗ್ಗೆ ಇಡೀ ವಿಶ್ವದ ಕ್ರಿಕೆಟ್ ಪಂಡಿತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಪಾಕಿಸ್ತಾನದ ಮಾಜಿ ವೇಗಿ ಅಖಿಬ್ ಜಾವೇದ್, ಬುಮ್ರಾ ಅಸಂಪ್ರದಾಯಿಕ ಬೌಲಿಂಗ್ ಶೈಲಿಯು ಗಾಯಕ್ಕೆ ಎಡೆಮಾಡಿಕೊಡಲಿದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಬುಮ್ರಾ, ಪಂಡಿತರು ಏನು ಹೇಳುತ್ತಾರೆ ಎಂಬುದರ ಬಗ್ಗೆ ಗಮನ ಕೊಡುವುದಿಲ್ಲ.
ಪಾಕ್​ ಆಟಗಾರನ ಎಡವಟ್ಟು: ಕ್ರಿಕೆಟ್​ ಇತಿಹಾಸದಲ್ಲಿ ಹಿಂದೆಂದೂ ನೋಡಿರದಂತಹ ರನೌಟ್​!
ಕ್ರಿಕೆಟ್​ ಲೋಕದಲ್ಲಿ ಹಲವು ವಿಚಿತ್ರ ಸಂಗತಿಗಳನ್ನು ಕಾಣಸಿಗುತ್ತವೆ. ಬೌಲಿಂಗ್​, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್​​ ಮಾಡುವ ವೇಳೆ ಹಲವು ಮನರಂಜನೀಯ ಕ್ಷಣಗಳು ಕ್ರೀಡಾಭಿಮಾನಿಗಳಿಗೆ ಸಿಕ್ಕರೂ, ಅದೇ ಮನರಂಜನೆ ಆಟಗಾರರನ್ನು ಪೇಚಿಗೆ ಸಿಲುಕಿಸುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.​ ಗುರುವಾರ ಅಬುದಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್​ ಪಂದ್ಯದ ಮೂರನೇ ದಿನದಾಟದಲ್ಲಿ ಪಾಕಿಸ್ತಾನ ಆಟಗಾರರು ಮಾಡಿದ ಒಂದು ಎಡವಟ್ಟು ಸಾಮಾಜಿಕ ತಾಲತಾಣದಲ್ಲಿ ಪಾಕ್​ ತಂಡ ಮತ್ತೊಮ್ಮೆ ನಗೆಪಾಟಲಿಗೆ ಗುರಿಯಾಗುವಂತೆ ಮಾಡಿದೆ. ಆಶಿಸ್​ ತಂಡದ ಬೌಲರ್​ ಪೀಟರ್​ ಸಿಡ್ಲ್ ಎಸೆದ 52ನೇ ಓವರ್​ನಲ್ಲಿ​ ಚೆಂಡು ಪಾಕ್​ ಆಟಗಾರ ಅಝರ್​ ಅಲಿ ಬ್ಯಾಟಿಗೆ ತಾಗಿ ಥರ್ಡ್​ ಮ್ಯಾನ್​ ವಿಭಾಗದಲ್ಲಿ ಬೌಂಡರಿ ಗೆರೆಯತ್ತ ಸಾಗುತ್ತಿತ್ತು. ಹೊಡೆತದಲ್ಲಿ ಬಲವಿಲ್ಲದಿದ್ದರಿಂದ ಚೆಂಡು ನಿಧಾನಗತಿಯಲ್ಲಿ ಸಾಗಿ ಬೌಂಡರಿ ಗೆರೆಯ ಸಮೀಪ ಹೋಗಿ ನಿಂತ್ತಿತ್ತು.
ವಿರಾಟ್ ಜೊತೆ ಆಮೀರ್ ಮೈಂಡ್ ಗೇಮ್
ಇಂಗ್ಲೆಂಡ್‌ನಲ್ಲಿ ಕಳೆದ ವರ್ಷ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಪರಾಭವ ಕಂಡ ಟೀಮ್ ಇಂಡಿಯಾ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಇದು ಪಾಕ್ ವಿರುದ್ಧ ಎದುರಾದ ಅತಿ ಹೀನಾಯ ಸೋಲುಗಳಲ್ಲಿ ಒಂದಾಗಿದೆ. ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆನಿಸಿದ್ದರೂ ಅಂತಿಮವಾಗಿ 180 ರನ್ ಅಂತರದ ಬೃಹತ್ ಸೋಲಿಗೊಳಗಾಗಿತ್ತು. ಪಾಕ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಮೊಹಮ್ಮದ್ ಆಮೀರ್ , ನಾಯಕ ವಿರಾಟ್ ಕೊಹ್ಲಿ ಜೊತೆಗೆ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ವಿಕೆಟುಗಳನ್ನು ಕಬಳಿಸಿದ್ದರು. ಈ ಬಗ್ಗೆ ನೆನಪಿಸಿಕೊಂಡಿರುವ ಆಮೀರ್, ರನ್ ಮೆಶಿನ್ ವಿರಾಟ್ ಕೊಹ್ಲಿ ವಿರುದ್ಧ ಆಡಿರುವ ಮೈಂಡ್ ಗೇಮ್ ಆಟದ ಬಗ್ಗೆ ವಿವರಣೆ ನೀಡಿದ್ದಾರೆ. ವಿರಾಟ್ ಬ್ಯಾಟಿಂಗ್ ಮಾಡಲು ಬಂದಾಗ ನಾನು ಇನ್ ಸ್ವಿಂಗರ್ ದಾಳಿ ಮಾಡಿದೆ.

Want to stay updated ?

x

Download our Android app and stay updated with the latest happenings!!!


90K+ people are using this